ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲು
ಹಂಪ್ಸ್ ನಿರ್ಮಾಣಕ್ಕೆ ಆಗ್ರಹ
ಎಸ್. ಎಸ್. ಪಿ.ಯು ನಲ್ಲಿ
ಕಾಲೇಜು ಮುಗಿಸಿ ಮನೆಗೆ ತೆರಳುವ ಸಂದರ್ಭ ಮುಖ್ಯ ರಸ್ತೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಏಕಾಏಕಿ ಕಾರೊಂದು ಹರಿದು ಮೂವರು ವಿದ್ಯಾರ್ಥಿನೀಯರು ಗಂಭೀರ ಗಾಯಗೊಂಡ ಘಟನೆ ಜೂ.1 ಸಂಜೆ ವೇಳೆ ನಡೆದಿದೆ.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಿಂಚನ ವಿ.ಪಿ, ಬಿಂಬಿಕ, ಹನಿಷ್ಕ ಎಸ್ ಆರ್, ಶಾಲಿನಿ ಎಂ, ಜಷ್ಮಿತಾ, ಕೃತಿಯವರ ಮೇಲೆ ಕಾರು ಹರಿದು ಗಾಯಗಳಾಗಿವೆ. ವಲ್ಲೀಶ ಸಭಾಭವನದಲ್ಲಿ ಎದುರು ಭಾಗ, ಕಾಲೇಜು ತಿರುವಿನ ಸಮೀಪ ವಿದ್ಯಾರ್ಥಿಗಳು ಸುಬ್ರಹ್ಮಣ್ಯ ಪೇಟೆ ಕಡೆ ತೆರಳುತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನೀಯರು ರಸ್ತೆಗೆ ಎಸೆಯಲ್ಪಟ್ಟು ಸಿಂಚನಾ ಎಂಬವಳಿಗೆ ಹಲ್ಲಿಗೆ ರಕ್ತಗಾಯವಾಗಿದ್ದು, ಹನಿಷ್ಕಾ ಮತ್ತು ಬಿಂಬಿಕಾ ಎಂಬವರಿಗೆ ಕಾಲಿಗೆ ತೀವ್ರ ತರದ ಗಾಯವಾಗಿದರ, ಇನ್ನು ಕೆಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಗಂಭೀರ ಗಾಯಗೊಂಡ ಸಿಂಚನ ವಿ.ಪಿ, ಸುಳ್ಯ ಸರಕಾರಿ ಆಸ್ಪತ್ರೆ ಹಾಗೂ ಬಿಂಬಿಕ, ಹನಿಷ್ಕ ಎಸ್ ಆರ್, ಇವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೋಯ್ಯಲಾಗಿದ್ದು ಚಿಕಿತ್ಸೆ ಪಡೆಯುತಿದ್ದಾರೆ.
ಶಾಲಿನಿ ಎಂ, ಜಷ್ಮಿತಾ, ಕೃತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆ.ಎ.27 ಸಿ 4259 ಕಾರನ್ನು ವಶಕ್ಕೆ ಪಡೆದುಕೊಂಡು ಚಾಲಕ ಸಂಜೀವ ಗೌಡ ವಿರುದ್ದ ಪ್ರಕರಣ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಹಂಪ್ಸ್ ನಿರ್ಮಾಣಕ್ಕೆ ಆಗ್ರಹ
ಕುಮಾರಧಾರ ಬಳಿಯಿಂದ ಕ್ಷೇತ್ರದಲ್ಲಿ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಅಭಿವೃದ್ಧಿ ಗೊಂಡಿದೆ. ಆದರೆ ಆಯ್ದ ಸ್ಥಳಗಳಲ್ಲಿ ಹಂಪ್ಸ್ ನಿರ್ಮಾಣವಾಗದೇ ಇಂತಹ ಘಟನೆಗಳು ಮರುಕಳುಹಿಸುತ್ತಿವೆ ಎಂಬ ದೂರು ಕೇಳಿಬಂದಿದೆ. ಎಸ್.ಎಸ್.ಪಿ.ಯು ಕಾಲೇಜಿನ ವಲ್ಲೀಶ ಸಭಾಭವನದ ಬಳಿ, ಕೆ.ಎಸ್.ಎಸ್ ಕಾಲೇಜು ಬಳಿ, ಬಿಲದ್ವಾರದ ಬಳಿಯ ರಸ್ತೆಯ ಎರಡು ಕಡೆಯಲ್ಲೂ ರಬ್ಬರ್ ಹಂಪ್ಸ್ ನಿರ್ಮಾಣ ಮಾಡಬೇಕು ಹಾಗೂ ಶಾಲಾ-ಕಾಲೇಜು ವಲಯ ಫಲಕ ಅಳವಡಿಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ವಲ್ಲೀಶ ಬಳಿ ಈ ಹಿಂದೆಯೂ ನಡೆದ ಅಪಘಾತದಲ್ಲಿ ಪ್ರಾಣಹಾನಿ ಆಗಿತ್ತು.