ಗುತ್ತಿಗಾರಿನಲ್ಲಿ ವಿಶ್ವ ಪರಿಸರ ದಿನಾಚರಣೆ- ಮಳೆ ನೀರು ಸಂಗ್ರಹ ಮಾಹಿತಿ ಹಾಗೂ ಪರಿಸರ ಜಾಗೃತಿ ಕಾರ್ಯಾಗಾರ

0

ಭಾರತ ಸರ್ಕಾರಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ ಮಂಗಳೂರು ,ಸುಳ್ಯ ಯುವಜನ ಸಂಯುಕ್ತ ಮಂಡಳಿ, ಸರಕಾರಿ ಪದವಿಪೂರ್ವ ವಿದ್ಯಾಲಯ ಗುತ್ತಿಗಾರು ಇವರ ಆಶ್ರಯದಲ್ಲಿ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಮತ್ತು ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇವರ ಸಹಯೋಗದಲ್ಲಿ ಪರಿಸರಕ್ಕಾಗಿ ಜೀವನ ಶೈಲಿ ಕಾರ್ಯಕ್ರಮದಡಿಯಲ್ಲಿ ಮಳೆ ನೀರು ಸಂಗ್ರಹ ಮಾಹಿತಿ ಹಾಗೂ ಪರಿಸರ ಜಾಗೃತಿ ಕಾರ್ಯಾಗಾರ -2023 ಸರಕಾರಿ ಪದವಿಪೂರ್ವ ವಿದ್ಯಾಲಯ ಗುತ್ತಿಗಾರಿನಲ್ಲಿ ಜೂ.5 ರಂದು ನಡೆಯಿತು.


ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ.ಹೆಚ್.ಪಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಪರಿಸರ ಸಂರಕ್ಷಣೆ ಈಗ ಇಲಾಖೆಯ ಜವಾಬ್ದಾರಿ ಮಾತ್ರ ಅಲ್ಲ.ಪ್ರತಿಯೊಬ್ಬ ವ್ಯಕ್ತಿಇದಕ್ಕೆ ಜವಾಬ್ದಾರರಾಗಿರುತ್ತಾರೆ.
ಪರಿಸರ ಸಂರಕ್ಷಣೆ ಮತ್ತು
ಕಾಡಿನ ಸಂರಕ್ಷಣೆಯ ಸಮತೋಲನ ಕಾಪಾಡುವುದು ಆದ್ಯತೆಯಾಗಬೇಕು ಎಂದು ತಿಳಿಸಿದರು.


ಬಂಟಮಲೆ ಅಕಾಡೆಮಿ ಅಧ್ಯಕ್ಷ
ಎ‌.ಕೆ.ಹಿಮಕರ ಮಾತನಾಡಿ
“ಆಧುನೀಕರಣ-ನಗರೀಕರಣ ನೇರವಾಗಿ ಪರಿಸರ ಸಮತೋಲನ ಹದಗೆಡುವುದಕ್ಕೆ ಕಾರಣವಾಗಿದೆ.
ಮಾನವನ ಅತಿಯಾದ ಹಸ್ತಕ್ಷೇಪ ವನ್ಯಜೀವಿಗಳ ನೆಲೆಗೆ ತೊಂದರೆಯಾಗಿದೆ.
ಪರಿಣಾಮ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡಲು ಕಾರಣವಾಗಿದೆ.
ಭೂಮಿಯನ್ನು ವಾಸಕ್ಕೆ ಯೋಗ್ಯವಾಗುವಂತೆ ಇರಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪನ್ಯಾಸಕಿ ಶ್ರೀಮತಿ ಜಕೀನಾ ಡಿ ಸೋಜಾ,
ಹಿರಿಯ ನಾಟಿ ವೈದ್ಯೆ ಶ್ರೀಮತಿ ಪುಷ್ಪಾವತಿ ಬುಡ್ಲೆಗುತ್ತು,
ಗುತ್ತಿಗಾರು ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ರೇವತಿ ಆಚಳ್ಳಿ ಸಭಾಧ್ಯಕ್ಷತೆ ವಹಿಸಿದ್ದರು.
ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ, ಪೂರ್ವಾಧ್ಯಕ್ಷ ಶಿವಪ್ರಕಾಶ್ ಕಡಪಳ, ನಿರ್ದೇಶಕ ದಿನೇಶ್ ಹಾಲೆಮಜಲು, ಆದರ್ಶ ಯೂತ್ ಕ್ಲಬ್ ನ ಅಧ್ಯಕ್ಷ ಸತೀಶ್ ಬಂಬುಲಿ, ವೀರ ಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಮಾಧವ ಎರ್ದಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತೇಜಸ್ವಿ ಕಡಪಳ ಸ್ವಾಗತಿಸಿ,ಯುವಜನ ಸಂಯುಕ್ತ ಮಂಡಳಿಯ ಕೋಶಾಧಿಕಾರಿ ಮುರಳಿ ನಳಿಯಾರು ವಂದಿಸಿದರು.
ವಿಜಯಕುಮಾರ್ ಉಬರಡ್ಕ, ಸತೀಶ್ ಮೂಕಮಲೆ ಸಹಕರಿಸಿದರು.
ಉಪನ್ಯಾಸಕ ರಂಜಿತ್ ಮತ್ತು ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.
ಪರಿಸರ ಜಾಗೃತಿ ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಿರಿಧಾನ್ಯ ಮೇಳವನ್ನು ಏರ್ಪಡಿಸಲಾಗಿತ್ತು. ‌
ನಿಧಿ ಹೋಂ ಪ್ರೊಡಕ್ಟ್ಸ್ ಮಾಲಕ ರಾಧಾಕೃಷ್ಣ ಇಟ್ಟಿಗುಂಡಿ ಸಿರಿಧಾನ್ಯಗಳ ಬಗ್ಗೆ ಹಾಗೂ ಬಳಕೆಯ ಕುರಿತು ಮಾಹಿತಿ ನೀಡಿದರು.