ಸುಬ್ರಹ್ಮಣ್ಯ ವಲಯದ ನಾಲ್ಕೂರು ಗ್ರಾಮದ ಕಲ್ಲಾಜೆ ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅರಣ್ಯ ಇಲಾಖೆ ವತಿಯಿಂದ ಸಸಿಗಳ ವಿತರಣೆ ಆರಂಭಿಸಲಾಗಿದೆ.

ಸಸ್ಯ ಕ್ಷೇತ್ರದಲ್ಲಿ ಸಾಗುವಾನಿ, ನೇರಳೆ, ಮಾವು, ಹಲಸು, ಶ್ರೀ ಗಂಧ, ರಾಂಪತ್ರ, ರಕ್ತ ಚಂದನ, ಬಿಲ್ವ ಪತ್ರೆ, ಮಹಾಗನಿ, ಕರಿಬೇವು, ಕಹಿ ಬೇವು, ರಂಬುಟ, ಜಂಬು ನೇರಳೆ, ಕೋಳಿ ಜುಟ್ಟು, ನೆಲ್ಲಿ, ಮಂಚುಳಿ, ಪುನರ್ ಪುಳಿ, ನಕ್ಷತ್ರ ಹಣ್ಣು, ಹುಣಸೆ ಹಾಗೂ ಇರತೇ 58 ಜಾತಿಯ 43 ಸಾವಿರ ಸಸಿಗಳು ವಿತರಣೆ ಗೆ ಲಭ್ಯವಿದೆ.

ಗಿಡವೊಂದಕ್ಕೆ ಮೂರು ವರ್ಷಗಳ ಅವಧಿಗೆ ಒಟ್ಟಾಗಿ ₹ 135 ಸಿಗಲಿದೆ. ಜಾಗದ ಪಹಣಿ ಪತ್ರ, ನಕ್ಷೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಪ್ರತಿಗಳನ್ನು ಅರಣ್ಯ ಇಲಾಖೆಗೆ ಸಲ್ಲಿಸಿ ಕಲ್ಲಾಜೆ ಸಸ್ಯ ಕ್ಷೇತ್ರದಿಂದ ಗಿಡಗಳನ್ನು ಪಡೆಯುವಂತೆ ಕೋರಲಾಗಿದೆ.

ಸಸಿಯೊಂದರ ದರ 6×9 ಬ್ಯಾಗ್ ಸೈಜ್ ಗೆ ರೂ. 6 ಹಾಗೂ 8×12 ಬ್ಯಾಗ್ ಸೈಜ್ ದರ ₹ 23 ಇರಲಿದೆ.