ಬೆಂಗಳೂರಿನಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ, ಬೆಂಗಳೂರು ವತಿಯಿಂದ ಭಾವೀ ವಧೂವರರ ಮುಖಾಮುಖಿ ಭೇಟಿ

0

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಹಾಗೂ ಯುವ ಘಟಕದ ಸಹಯೋಗದಲ್ಲಿ ಮಹಿಳಾ ಘಟಕದ ವತಿಯಿಂದ ಭಾವೀ ವಧೂವರರ ಮುಖಾಮುಖಿ ಭೇಟಿ ಕಾರ್ಯಕ್ರಮವು ಬೆಂಗಳೂರಿನ ಲಗ್ಗರೆಯಲ್ಲಿರುವ ‘ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ’ ದಲ್ಲಿ ಜೂ.11ರಂದು ಜರುಗಿತು.


ಕೆ.ಡಿ.ಕೆ. ಗೌಡ ಸಮಾಜದ ಅಧ್ಯಕ್ಷರಾದ ರವೀಂದ್ರನಾಥ್ ಕೇವಳ ಅವರ ಅನುಪಸ್ಥಿತಿಯಲ್ಲಿ ಗೌಡ ಸಮಾಜದ ಜಂಟಿ ಕಾರ್ಯದರ್ಶಿ ನಾಗೇಶ್ ಬಂಟೋಡಿ ಅವರು ಅಧ್ಯಕ್ಷತೆ ವಹಿಸಿ, ಮದುವೆ ಕೇವಲ ಎರಡು ಮನಸ್ಸುಗಳ ಮಿಲನವಷ್ಟೇ ಅಲ್ಲ, ಎರಡು ಕುಟುಂಬಗಳ ಸಮ್ಮಿಲನವೂ ಹೌದು ಎಂದು ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಕುಶಾಲಪ್ಪ ಪೋರೆಯನ ಅವರು ಸ್ವಾಗತಿಸಿದರು. ಮಹಿಳಾ ಘಟಕದ ಖಜಾಂಜಿ ಶ್ರೀಮತಿ ವನಿತ ರಾಧಾಕೃಷ್ಣ ಗುತ್ತಿಗಾರುಮೂಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ‘ನಮ್ಮ ಸಂಸ್ಕೃತಿ , ಆಚಾರ – ವಿಚಾರಗಳನ್ನು ಉಳಿಸಿಕೊಂಡು ಅದನ್ನು ಯುವಪೀಳಿಗೆ ಮುಂದುವರೆಸಿಕೊಂಡು ಹೋಗುವುದು’ ಈ ಕಾರ್ಯಕ್ರಮದ ಮುಖ್ಯ ಉದ್ಧೇಶವಾಗಿದೆ ಎಂದರು.

ಜಂಟಿ ಕಾರ್ಯದರ್ಶಿ ಶ್ರೀಮತಿ ರಾಧಾ ದಾಮೋದರ್ ಕುದುಕುಳಿ, ಗೌಡ ಸಮಾಜದ ಖಜಾಂಜಿಗಳಾದ ಸೋಮಣ್ಣ ಕುಂಬಗೌಡನ ಮತ್ತು ಯುವ ಘಟಕದ ಉಪಾಧ್ಯಕ್ಷ ದಯಾನಂದ ಕುಂಬ್ಲಾ ಡಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ, ಪುತ್ತೂರು, ಹಾಸನ, ಸಕಲೇಶಪುರ ಹಾಗೂ ಮಡಿಕೇರಿಯಿಂದ ಸುಮಾರು 80 ಭಾವೀ ವಧೂವರರು ಪೋಷಕರೊಂದಿಗೆ ಭಾಗವಹಿಸಿದ್ದರು.


ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀಮತಿ ಶಶಿಪ್ರಭಾ ಮಡ್ತಿಲ ವಂದಿಸಿದರು. ಶ್ರೀಮತಿ ಲೀಲಾ ಸೋಮಣ್ಣ ಕುಂಬಗೌಡನ ಕಾರ್ಯಕ್ರಮ ನಿರೂಪಿಸಿದರು.