ರಸ್ತೆಗೆ ಉರುಳಿಬಿದ್ದ ಕಲ್ಲು – ಬೈಕ್ ಗೆ ಹಾನಿ
ಅಪಾಯದಂಚಿನಲ್ಲಿರುವ ಇನ್ನೊಂದು ಕಲ್ಲು
ಸೋಣಂಗೇರಿ – ಬೇಂಗಮಲೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಸಂದರ್ಭ ಜೆಸಿಬಿಯಲ್ಲಿ ಬರೆ ಸಮತಟ್ಟುಮಾಡುವಾಗ ಕಲ್ಲೊಂದು ಉರುಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಗೆ ಬಿದ್ದು ಬೈಕ್ ಸವಾರನಿಗೆ ಸ್ವಲ್ಪ ಗಾಯವಾಗಿ ಬೈಕ್ ಗೆ ಹಾನಿಯಾದ ಘಟನೆ ನಡೆದಿದೆ.
ಬೈಕ್ ಗೆ ಹೆಚ್ಚು ಹಾನಿಯಾಗಿದ್ದು ಮಾತುಕತೆಯ ಮೂಲಕ ಇತ್ಯರ್ಥವಾಗಿದೆಯೆಂದು ತಿಳಿದುಬಂದಿದೆ.
ಜೆಸಿಬಿ ಕೆಲಸದವರು ಬೈಕ್ ರಿಪೇರಿ ಮಾಡಿಕೊಡುವುದಾಗಿ ಹೇಳಿರುವುದಾಗಿ ತಿಳಿದುಬಂದಿದೆ.
ಅಪಾಯದಲ್ಲಿರುವ ಇನ್ನೊಂದು ಕಲ್ಲು
ಕಾಮಗಾರಿ ನಡೆಯುವ ಸ್ಥಳದಲ್ಲಿ ಇನ್ನೊಂದು ಕಲ್ಲು ಬರೆಯ ಬದಿಯಲ್ಲಿದ್ದು ಅಪಾಯವನ್ನು ಆಹ್ವಾನಿಸುವಂತಿದೆ.
ಮಳೆ ಬಂದಾಗ ಕಲ್ಲು ಜಾರಿ ಬೀಳುವ ಸಂಭವವಿದ್ದು ಕೂಡಲೇ ಅಲ್ಲಿಂದ ಕಲ್ಲನ್ನು ತೆರವುಗೊಳಿಸುವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.