ಗುತ್ತಿಗಾರು : ಚಿಕಿತ್ಸೆ ಸಹಾಯಕ್ಕಾಗಿ ಮನವಿ

0

ವಳಲಂಬೆಯ ಗಣಪಯ್ಯರವರಿಗೆ ಅನಾರೋಗ್ಯ ವಿದ್ದು, ಅವರು ಚಿಕಿತ್ಸೆಯ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ ಗಣಪ್ಪಯ್ಯ ಹೊಸೋಳಿಕೆ ಅವರಿಗೆ ಕಳೆದ ಅಕ್ಟೋಬರ್ 14ರಂದು ಬ್ರೈನ್ ಎಮರೇಜ್ ಆಗಿದ್ದು, ಕೂಡಲೇ ಅವರನ್ನು ಮಂಗಳೂರಿನ ಫಸ್ಟ್ ನೂರೋ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ತಲೆಯ ಒಳಗೆ ಶಸ್ತ್ರ ಚಿಕಿತ್ಸೆ ನಡೆಸಿ ನಂತರ ಚೇತರಿಸಿಕೊಂಡಿದ್ದರು.


ಮೂರು ತಿಂಗಳ ನಂತರ ವೈದ್ಯರ ಸಲಹೆಯಂತೆ ಮನೆಯವರ ಚಿನ್ನ ಅಡವಿಟ್ಟು ಇನ್ನೊಂದು ಶಸ್ತ್ರಚಿಕಿತ್ಸೆಯೂ ನಡೆಯಿತು. ಒಂದು ಸುತ್ತಿನ ತಪಾಸಣೆ ಕೆಲವು ದಿನಗಳ ನಂತರ ನಡೆಯಲಿದೆ. ಈ ಎಲ್ಲಾ ಚಿಕಿತ್ಸೆಗೆ ಈಗಾಗಲೇ ಸುಮಾರು 8 ಲಕ್ಷದಷ್ಟು ಖರ್ಚಾಗಿದ್ದು, ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದೆ.
ಇವರ ತಾಯಿಗೂ 80 ವರ್ಷ ಪ್ರಾಯವಾಗಿದ್ದು, ಅನಾರೋಗ್ಯದಿಂದ ಇದ್ದಾರೆ. ಅವರು ಮಂಗಳೂರು ಶ್ರೀನಿವಾಸ ಆಸ್ಪತ್ರೆಯಲ್ಲಿ 14 ವರ್ಷದ ಹಿಂದೆ ದಾಖಲಾಗಿ ಹಾರ್ಟ್ ನಲ್ಲಿ ಬ್ಯಾಟರಿ ಇಡಲಾಗಿದ್ದು, ಅದನ್ನು ಬದಲಾವಣೆ ಮಾಡುವ ಹೊಣೆಗಾರಿಕೆಯು ಇವರ ಮೇಲಿದೆ.


ಇವರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಈಗಾಗಲೇ ಸಂಬಂಧಿಕರು, ದಾನಿಗಳ ಸಹಾಯದಿಂದ ಮಾತ್ರವಲ್ಲದೆ ಮನೆಯವರ ಚಿನ್ನ ಅಡವಿಟ್ಟು ಚಿಕಿತ್ಸೆ ಕೊಡಿಸಲಾಗಿದೆ.


ಇವರ ಪುತ್ರಿ ವಳಲಂಬೆ ಹಿ.ಪ್ರಾ.ಶಾಲೆಯ 4ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಜವಾಬ್ದಾರಿಯೂ ಅವರ ಮೇಲಿದೆ. ಎಲ್ಲಾ ಕಾರಣಗಳಿಂದಾಗಿ ಈ ಕುಟುಂಬಕ್ಕೆ ಧನ ಸಹಾಯದ ಅಗತ್ಯವಿದ್ದು ಸಹೃದಯಿಗಳು ಸಹಾಯ ಮಾಡಲು ಮುಂದಾಗಬೇಕು. 09449013526 ನಂಬರ್ ಗೆ ಗೂಗಲ್ ಪೇ ಅಥವಾ ಫೋನ್ ಪೇ ಮಾಡಬಹುದಾಗಿದ್ದು ಸಹಾಯ ಹಸ್ತ ಚಾಚಿ ಸಂಕಷ್ಟಕ್ಕೆ ಬಿದ್ದ ಈ ಕುಟುಂಬದ ನೋವಿಗೆ ಸ್ಪಂದಿಸಲು ವಿನಂಬ್ರವಾಗಿ ವಿನಂತಿಸಿದ್ದಾರೆ.