ಜೂ.25: ಪೆರಾಜೆ ಸಹಕಾರಿ ಸಂಘಕ್ಕೆ ಚುನಾವಣೆ

0

13 ಸ್ಥಾನಕ್ಕೆ ಒಟ್ಟು 33 ನಾಮಪತ್ರ ಸಲ್ಲಿಕೆ

ಜೂ.19 ನಾಮಪತ್ರ ಹಿಂಪಡೆಯಲು ಕೊನೆಯ ದಿನ

ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಜೂ.25ರಂದು ಚುನಾವಣೆ ನಡೆಯಲಿದ್ದು, 13 ಸ್ಥಾನಗಳಿಗೆ ಒಟ್ಟು 33 ನಾಮಪತ್ರಗಳು ಸಲ್ಲಿಕೆಯಾಗಿದೆ.

ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಒಟ್ಟು 6 ಮಂದಿ ನಿರ್ದೇಶಕರುಗಳ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಹಾಲಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ನಂಜಪ್ಪ ನಿಡ್ಯಮಲೆ, ಜಯರಾಮ ನಿಡ್ಯಮಲೆ, ಧನಂಜಯ ಕೋಡಿ, ದೀನರಾಜ್ ಡಿ.ಸಿ., ಹೊನ್ನಪ್ಪ ಅಮೆಚೂರು, ಸೀತಾರಾಮ ಕದಿಕಡ್ಕ, ಅಶೋಕ ಪೆರುಮುಂಡ ನಾಮಪತ್ರ ಸಲ್ಲಿಸಿದ್ದಾರೆ.


ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸುರೇಶ್ ಪೆರುಮುಂಡ, ದಯಾನಂದ ಪೆರುಮುಂಡ, ಗೌತಮ್ ಎಂ.ಎಸ್., ಚಿದಾನಂದ ಪೀಚೆ, ಜ‌ನಾರ್ದನ ನಾಯ್ಕ ನಿಡ್ಯಮಲೆ, ಉಮೇಶ್ ಕುಂಬಳಚೇರಿ, ಜಗದೀಶ್ ಕೆ.ಜಿ. ಅವರು ನಾಮಪತ್ರ ಸಲ್ಲಿಸಿದ್ದಾರೆ.

ಪರಿಶಿಷ್ಟ ಜಾತಿ ಕ್ಷೇತ್ರದಿಂದ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಯರಾಮ ಪಿ.ಟಿ, ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರೀಶ್ ಪಿ.ಪಿ. ನಾಮಪತ್ರ ಸಲ್ಲಿಸಿದ್ದಾರೆ. ಪರಿಶಿಷ್ಟ ಪಂಗಡ ಕ್ಷೇತ್ರದಿಂದಲೂ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶೇಷಪ್ಪ ಎನ್.ವಿ. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಧರ ನಾಯ್ಕ ಕೆ‌.ಸಿ. ನಾಮಪತ್ರ ಸಲ್ಲಿಸಿದ್ದಾರೆ.
ಮಹಿಳಾ ಸ್ಥಾನದಿಂದ ಎರಡು ಮಂದಿ ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಪುಷ್ಪಾವತಿ ವೈ.ಜೆ ಹಾಗೂ ಪ್ರಮೀಳ ಎನ್. ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ರೋಹಿಣಿ ಎಂ‌.ಜಿ. ಲೀಲಾವತಿ ಎನ್.ಜೆ., ಶೀಲಾ ಎ‌ನ್.ಸಿ. ಅವರು ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ವರ್ಗ ಎ ಕ್ಷೇತ್ರದಿಂದ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರದೀಪ್ ಕೆ.ಎಂ. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಅಬೂಬಕ್ಕರ್ ಪಿ.ಎಂ. ನಾಮಪತ್ರ ಸಲ್ಲಿಸಿದ್ದಾರೆ.


ಹಿಂದುಳಿದ ವರ್ಗ ಬಿ ಕ್ಷೇತ್ರದಿಂದಲೂ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಹೊನ್ನಪ್ಪ ಅಮೆಚೂರು, ದೀನರಾಜ್ ಡಿ‌.ಸಿ., ಸೀತಾರಾಮ ಕದಿಕಡ್ಕ, ಅಶೋಕ ಪೆರುಮುಂಡ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಪ್ರಸಾದ್ ಪಿ.ಬಿ. ನಾಮಪತ್ರ ಸಲ್ಲಿಸಿದ್ದಾರೆ.


ಸಾಲರಹಿತ ಕ್ಷೇತ್ರದಿಂದ ಓರ್ವ ನಿರ್ದೇಶಕರ ಆಯ್ಕೆಯಾಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಿರಣ್ ಬಿ.ಎಲ್. ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನೇಮಿರಾಜ ಪಿ.ಎಚ್. ನಾಮಪತ್ರ ಸಲ್ಲಿಸಿದ್ದಾರೆ.

ಜೂ.18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜೂ.19ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನವಾಗಿದೆ. ಜೂ.25ರಂದು ಸಂಘದ ಸದಸ್ಯರುಗಳಿಂದ ಮತದಾನ ನಡೆಯಲಿದ್ದು, ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.