ಕೆ.ಎಫ್.ಡಿ.ಸಿ‌. ಕಾರ್ಮಿಕರಿಗೆ ಉಳಿಕೆ ಬೋನಸ್ ನೀಡಿ

0

ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ನೇತೃತ್ವದಲ್ಲಿ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ

ಕೆಎಫ್ ಡಿಸಿ ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 20 ಶೇ ಬೋನಸ್ ನೀಡಬೇಕೆಂದು ಕಾರ್ಮಿಕರ ಪರವಾಗಿ ನ.ಪಂ. ಸದಸ್ಯ ರಿಯಾಸ್ ಕಟ್ಟೆಕಾರ್ ಕೆಎಫ್ ಡಿಸಿ‌ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ಅರಣ್ಯ ರಬ್ಬರ್ ಅಭಿವೃದ್ಧಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ತಾವುಗಳು ಅಧಿಕಾರ ವಹಿಸಿಕೊಂಡ ನಂತರ ಸಂಸ್ಥೆಗೆ ಲಾಭ ಬರುವ ರೀತಿಯಲ್ಲಿ ಮುನ್ನಡೆಸಿ ಪ್ರಗತಿ ಪರ ಹೆಜ್ಜೆಗಳನ್ನು ಇಟ್ಟಿರುವುದು ಕಾರ್ಖಾನೆಯಲ್ಲಿ ಮತ್ತು ಪ್ಲಾಂಟೆಶನ್‌ನಲ್ಲಿ ದುಡಿಯುತ್ತಿರುವ ಕಾರ್ಮಿಕರ ಕಾರ್ಯದಕ್ಷತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿ ಕಾರ್ಮಿಕರ ಪ್ರೀತಿಗೆ, ವಿಶ್ವಾಸಕ್ಕೆ ಮತ್ತು ಮೆಚ್ಚುಗೆಗೆ ಪಾತ್ರರಾಗಿರುತ್ತೀರಿ. ಪ್ರಸ್ತುತ ತಮ್ಮ ಪ್ರಯತ್ನದಿಂದ ನಿಗಮವು ಲಾಭದಲ್ಲಿ ನಡೆಯುತ್ತಿದ್ದು, ಕಾರ್ಮಿಕರಲ್ಲಿ ಹೆಚ್ಚಿನ ಭರವಸೆ ಮೂಡಿರುತ್ತದೆ. ಈ ಒಂದು ಸಂದರ್ಭದಲ್ಲಿ ತಾವುಗಳು ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತ ಕಾಪಾಡಬೇಕಾಗಿರುವುದು ಅಗತ್ಯವಾಗಿರುತ್ತದೆ.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಹಾಯ ಮತ್ತು ಅನುಕೂಲವಾಗುವ ದೃಷ್ಟಿಯಿಂದ ಮತ್ತು ಕಾರ್ಮಿಕರ ಖರ್ಚು ವೆಚ್ಚಗಳನ್ನು ಸರಿದೂಗಿಸುವ ದೃಷ್ಟಿಯಿಂದ ಬೋನಸ್ ನೀಡುವುದು ಅಗತ್ಯವಾಗಿರುತ್ತದೆ. ಕಾರ್ಮಿಕರ ದೈನಂದಿನ ಖರ್ಚು ವೆಚ್ಚಗಳು, ಬೆಲೆಯೇರಿಕೆ ಮತ್ತು ಕಾಮಿಕರ ಮಕ್ಕಳ ವಿದ್ಯಾಭ್ಯಾಸದ ಖರ್ಚು ಹೆಚ್ಚಿರುವುದರಿಂದ ಎಲ್ಲಾ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಉದ್ದೇಶದಿಂದ ಬೋನಸ್‌ನ್ನು ನೀಡಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ.

2021-22 ರಲ್ಲಿ ಕಾರ್ಮಿಕರು ಶೇಕಡಾ 20 ನ್ನು ಬೋನಸ್ ರೂಪದಲ್ಲಿ ನೀಡಬೇಕೆಂದು ತಮ್ಮ ಸನ್ನಿಧಾನಕ್ಕೆ ಮನವಿ ಮಾಡಿಕೊಂಡಿದ್ದು ತಾವುಗಳು ಶೇಕಡಾ 8.33 ನ್ನು ಬೋನಸ್ ರೂಪದಲ್ಲಿ ನೀಡಿರುತ್ತಿರಿ. ಪ್ರಸ್ತುತ ನಿಗಮವು ಲಾಭದಲ್ಲಿ ನಡೆಯುತ್ತಿರುವುದರಿಂದ ತಾವುಗಳು ನಾವು ಹಿಂದೆ ಮನವಿ ಮಾಡಿದಂತೆ ಉಳಿಕೆಯಾಗಿರುವ ಬೋನಸ್‌ನ್ನು ನೀಡುವುದು ಅಗತ್ಯವಾಗಿರುತ್ತದೆ.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು ಲಾಭದಲ್ಲಿ ನಡೆಯುತ್ತಿರುವುದರಿಂದ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ 2021-22 ರಲ್ಲಿ ಉಳಿಕೆಯಾಗಿರುವ ಬೋನಸ್‌ನ್ನು ನೀಡಬೇಕೆಂದು ಕಾರ್ಮಿಕರ ಪರವಾಗಿ ಅವರು ಮನವಿ ನೀಡಿದ್ದಾರೆ. ಈ ಸಂದರ್ಭ ಸಿದ್ದಿಕ್ ಕೊಕ್ಕೊ, ಶಹೀದ್ ಪಾರೆ ಇದ್ದರು.