ಸಂಕಷ್ಟದಲ್ಲಿರುವ ಜನ
ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿದ ಕಂಟ್ರಾಕ್ಟರ್
ಕೊಲ್ಲಮೊಗ್ರ ಗ್ರಾಮದ ಕೊಲ್ಲಮೊಗ್ರು ಕಡಂಬಳ ರಸ್ತೆಯ ಕಡಂಬಳ ಎಂಬಲ್ಲಿ ಸೇತುವೆ ನಿರ್ಮಿಸಲು ಕೆಲಸ ಆರಂಭಿಸಿ, ಕಾಮಗಾರಿ ಅರ್ಧದಲ್ಲಿ ನಿಲ್ಲಿಸಿ, ಈ ಭಾಗದ ಜನ ಸಂಕಷ್ಟಕ್ಕೆ ಬಿದ್ದ ಘಟನೆ ವರದಿಯಾಗಿದೆ.
ಮಾಜಿ ಸಚಿವ ಎಸ್ ಅಂಗಾರ ಅವರು 3೦ ಲಕ್ಷ ಅನುದಾನದ ಇರಿಸಿ ಇದರಲ್ಲಿ ಇಲ್ಲಿ ಸೇತುವೆ ನಿರ್ಮಿಸುವುದಾಗಿ ನಿರ್ಧಾರವಾಗಿ ಅದರಂತೆ ಇಲ್ಲಿ ಕಳೆದ ಸಾಲಿನ ಮಳೆಗೆ ಕೊಚ್ಚಿ ಹೋದ ಸೇತುವೆಯ ಅವಶೇಷಗಳನ್ನು ತೆಗೆದು ಹೊಸದಾಗಿ ಸೇತುವೆಯ ಫಿಲ್ಲರ್ ಗಳನ್ನು ರಚಿಸಲಾಗಿದೆ.
ಇದಾಗಿ ತಿಂಗಳು ಕಳೆದರು ಯಾವುದೇ ಕಾಮಗಾರಿ ಮರು ಆರಂಭ ಆಗಿಲ್ಲ, ಫಿಲ್ಲರ್ ನ ಎರಡೂ ಭಾಗದ ಮಣ್ಣು ತೆಗೆದಿದ್ದು ಇದ್ದ ಮಣ್ಣು ಕೊಚ್ಚಿ ಹೋಗಿದೆ.
ಜನ ಸಂಚರಿಸಲು ಪರ್ಯಾಯ ವ್ಯವಸ್ಥೆಯಾಗಿ ಅಲಿದುಳಿದ ಕಬ್ಬಿಣದ ಸಲಾಕೆಗಳನ್ನು ಫಿಲ್ಲರ್ ಮೇಲೆ ಹಾಕಿದ್ದು ನಡೆದಾಡುವ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ನಡೆದಾಡಲೂ ಹರಸಾಹಸ ಪಡಬೇಕಾಗಿದೆ.
ಈ ಸೇತುವ ಉಪಯೋಗಿಸುವ ಭಾಗದಲ್ಲಿ ಸುಮಾರು ೨೫ಕ್ಕೂ ಅಧಿಕ ಮನೆಗಲ್ಲಿದ್ದು ಹಲವಾರು ಮಕ್ಕಳು ಶಾಲೆ ಹೋಗುತಿದ್ದಾರೆ. ಕೂಲು ಕೆಲಸಕ್ಕೆ, ಉದ್ಯೋಗಕ್ಕೆ ತೆರಳುವವರು ಇದ್ದಾರೆ. ಇವರೆಲ್ಲರೂ ಸಂಕಷ್ಟಕ್ಕೆ ಬಿದ್ದಿದ್ದು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೆ ನಡೆಯುವ ಪರಿಸ್ಥಿತಿ ಬಂದಿದೆ. ಇಲ್ಲಿ ಹಾಕಿರುವ ತಾತ್ಕಾಲಿಕ ಕಬ್ಬಿಣದ ಸಲಾಕೆಗಳ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಡೆಯಬೇಕಾಗಿದೆ. ಒಂದೊಮ್ಮೆ ಈ ಭಾಗದಲ್ಲಿ ಅಸೌಖ್ಯತೆ ಉಂಟಾದಲ್ಲಿ ಇವರ ಪರಿಸ್ಥಿತಿ ದೇವರೇ ಬಲ್ಲ.
ಸೇತುವೆಯನ್ನು ತೆಗೆದು ಕೆಲಸ ಆರಂಭಿಸಿ ಇದೀಗ ಕೈಕಟ್ಟಿ ಕುಳಿತಿರುವ ಬಗ್ಗೆ ಅಕ್ರೋಶ ವ್ಯಕ್ತವಾಗಿದ್ದು ಅಕ್ರೋಶ ಕಟ್ಟೆಯೊಡೆಯುವ ಮುಂದೆ ಸಂಬಂಧಿಸಿದವರು ಎಚ್ಚರವಹಿಸ ಬೇಕಾಗಿದೆ.