ನಾಡಪ್ರಭುವಿಗೆ ನಾಡಿನ ನಮನ
ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡರ 514ನೇ ಜನ್ಮದಿನ. ಬೆಂಗಳೂರು ಕೆಂಪೇಗೌಡರು ನಮ್ಮ ನಾಡಿನ ಬಹುಮುಖ್ಯ ಸಾಂಸ್ಕೃತಿಕ ನಾಯಕರಲ್ಲೊಬ್ಬರು. ಶೌರ್ಯಕ್ಕೆ ಹೆಸರಾಗಿದ್ದ ಅಂದಿನ ಆವಟಿ ರಣಭೈರೇಗೌಡರ ಮನೆತನದಲ್ಲಿ ಜನಿಸಿದ ಕೆಂಪೇಗೌಡರು ‘ಪಾಳೇಗಾರ’ ಎಂದು ಹೆಸರು ಗಳಿಸಿದ್ದರಿಂದ ವಿಜಯನಗರದ ಚಕ್ರವರ್ತಿ ಶ್ರೀ ಅಚ್ಯುತದೇವರಾಯರಿಂದ ಬೆಂಗಳೂರಿನಲ್ಲಿ ಕೋಟೆ ಕಟ್ಟಲು ಪರವಾನಿಗೆ ಪಡೆಯಲು ಸಾಧ್ಯವಾಯಿತು. ಕೆಂಪೇಗೌಡರು 1513ರಲ್ಲಿ ಯಲಹಂಕದ ಸಮೀಪದ ಹಳ್ಳಿಯಲ್ಲಿ. ಅವರು ವಿಜಯನಗರ ಅರಸರ ಅಡಿಯಲ್ಲಿ ಮುಖ್ಯಸ್ಥರಾಗಿದ್ದರು ಮತ್ತು ಅವರು ಸಮರ್ಥರಾಗಿದ್ದಷ್ಟೇ ಅಲ್ಲದೆ ಮಹತ್ವಾಕಾಂಕ್ಷೆಯವರಾಗಿದ್ದರು. ಅವರು ಐಗೊಂಡಾಪುರ (ಇಂದಿನ ಹೆಸರಘಟ್ಟ) ಬಳಿಯ ಗುರುಕುಲದಲ್ಲಿ ಒಂಬತ್ತು ವರ್ಷಗಳ ಕಾಲ ಅಧ್ಯಯನ ಮಾಡಿದರು, ಅಲ್ಲಿ ಅವರು ರಾಜ್ಯ ಕೌಶಲ್ಯ ಮತ್ತು ಯುದ್ಧ ಕೌಶಲ್ಯಗಳನ್ನು ಕಲಿತರು. ನಾಡಪ್ರಭು ಹಿರಿಯ ಕೆಂಪೇಗೌಡರು, ಕೆಂಪೇಗೌಡ ಎಂದು ಜನಪ್ರಿಯರಾಗಿದ್ದರು, ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಊಳಿಗಮಾನ್ಯ ಆಡಳಿತಗಾರರಾಗಿದ್ದರು. ಸುಶಿಕ್ಷಿತ ಕೆಂಪೇಗೌಡರು ಮೊರಸು ಗೌಡರ ವಂಶಸ್ಥರಾದ ಕೆಂಪನಂಜೇಗೌಡರ ಉತ್ತರಾಧಿಕಾರಿಯಾಗಿದ್ದರು. ಅವರನ್ನು ಯಲಹಂಕನಾಡಿನ ಅರಸರು ಎಂದು ಕರೆಯಲಾಗುತ್ತಿತ್ತು. ಯಲಹಂಕ ನಾಡು ಪ್ರಭುಗಳಲ್ಲಿ ಹೆಚ್ಚು ಪ್ರಸಿದ್ಧರಾದವರು ಕೆಂಪೇಗೌಡ I. ಅವರು 1513 ರಿಂದ 1559 ರ ವರೆಗೆ 46 ವರ್ಷಗಳ ಕಾಲ ಆಳಿದರು. ಬೆಂಗಳೂರು ಕೋಟೆ ಮತ್ತು ಬೆಂಗಳೂರು ಪೇಟೆಯ ಕಟ್ಟಡವನ್ನು ಯೋಜಿಸಿ ಯಶಸ್ವಿಯಾಗಿ ಕಾರ್ಯಗತಗೊಳಿಸಿದರು. ಬೆಂಗಳೂರಿನ ಕೋಟೆಯನ್ನು ಮಾತ್ರ ನಿರ್ಮಿಸಲಿಲ್ಲ ಆದರೆ ಪಾಳೆಯಗಾರನ ಪಾತ್ರವನ್ನು ನಿರ್ವಹಿಸಲು ಮತ್ತು ಪ್ರದೇಶಕ್ಕೆ ಸ್ಥಿರವಾದ ಆಡಳಿತವನ್ನು ಒದಗಿಸಲು ನಗರದ ಸುತ್ತಲೂ ಹಲವಾರು ಕೋಟೆಗಳನ್ನು ಅಭಿವೃದ್ಧಿಪಡಿಸಿದರು . ಅವರು ನಿರ್ಮಿಸಿದ ಅಥವಾ ಅಭಿವೃದ್ಧಿಪಡಿಸಿದ ಇತರ ಕೆಲವು ಕೋಟೆಗಳೆಂದರೆ ಮಾಗಡಿ ಕೋಟೆ, ಸಾವನದುರ್ಗ ಕೋಟೆ, ನೆಲಪಟ್ಟಣ, ಹುತ್ರಿದುರ್ಗದ ಏಳು ಗೋಡೆಯ ಕೋಟೆ, ಹುಲಿಯೂರುದುರ್ಗ ಕೋಟೆ, ಕುದೂರಿನ ಭೈರವನದುರ್ಗ ಕೋಟೆ, ಶಿವಗಂಗಾ ಕೋಟೆ ಮತ್ತು ರಾಮದುರ್ಗ ಕೋಟೆ.
ಅವರು ನಿರ್ಮಿಸಿದ ಕೆಲವು ದೇವಾಲಯಗಳು ಬೆಂಗಳೂರಿನ ಗ್ರಾಮದೇವತೆ, ಅಣ್ಣಮ್ಮ ದೇವಿ, ದೊಡ್ಡ ಬಸವನಗುಡಿ ದೇವಾಲಯ, ದ್ರೌಪದಿ ಧರ್ಮರಾಯ ದೇವಾಲಯ ಮತ್ತು ಶಿವನಗಂಗೆಯ ಅನೇಕ ದೇವಾಲಯಗಳು. ನಾಡಪ್ರಭುಗಳ 513ನೇ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ‘ಬೆಂಗಳೂರಿನ ಜನಕ’ರನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ತರುಣ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ.
ಬೆಂಗಳೂರಿಗೆ ಏನಿಲ್ಲವೆಂದರೂ 1,100 ವರ್ಷಗಳ ಇತಿಹಾಸವಿದೆ. ಕನ್ನಡ ನಾಡಿನ ಬಹುಭಾಗದಿಂದ ಹಿಡಿದು ತಮಿಳುನಾಡಿನ ಮದುರೆಯವರೆಗೂ ಆಳಿದ ಹೊಯ್ಸಳರ ದೊರೆ ಬಲ್ಲಾಳನ ಕಾಲದಿಂದಲೂ ಬೆಂಗಳೂರಿನ ಉಲ್ಲೇಖವು ನಮಗೆ ಅನೇಕ ಕಡೆಗಳಲ್ಲಿ ಸಿಗುತ್ತದೆ. ಬೆಂಗಳೂರಿಗೆ ತಾಗಿಕೊಂಡೇ ಇರುವ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಎರಡೂ ಬಲ್ಲಾಳನ ನೆನಪಿನಲ್ಲಿ ಇರುವ ಊರುಗಳೇ ಆಗಿವೆ. ಅಂದರೆ, ‘ಬಲ್ಲಾಳಪುರ’ ಎನ್ನುವ ಹೆಸರೇ ಹೀಗೆ ಅಪಭ್ರಂಶಗೊಂಡು ಚಾಲ್ತಿಯಲ್ಲಿವೆ. ಆದರೆ, ಆ ಕಾಲಕ್ಕೆ ಈ ಊರು ಬಹುಶಃ ಒಂದು ದೊಡ್ಡ ಹಳ್ಳಿಯಾಗಿದ್ದು, ಬಹುಶಃ ಏಳೆಂಟು ಚದರ ಮೈಲಿಗಳಲ್ಲಿ ವಿಸ್ತರಿಸಿಕೊಂಡಿತ್ತೆನಿಸುತ್ತದೆ.
18 ಬಗೆಯ ಕಸುಬುಗಳನ್ನು ಆಧರಿಸಿದ ಮೂಲ ಬೆಂಗಳೂರಿನ ‘ಪೇಟೆ’ಗಳನ್ನು (ಉದಾ: ದೊಡ್ಡಪೇಟೆ, ಚಿಕ್ಕಪೇಟೆ, ತಿಗಳರ ಪೇಟೆ, ಕುರುಬರ ಪೇಟೆ, ಅರಳೇಪೇಟೆ, ಬಳೇಪೇಟೆ, ತರಗುಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಕುಂಬಾರರ ಪೇಟೆ, ನಗರ್ತರ ಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಉಪ್ಪಾರಪೇಟೆ ಇತ್ಯಾದಿಗಳು) ನೋಡಿದರೆ, ಇದು ಗೊತ್ತಾಗುತ್ತದೆ.
ಈ ‘ಮೂಲ ಬೆಂಗಳೂರೇ’ ಕೆಂಪೇಗೌಡರು ಕಟ್ಟಿದ ಬೆಂಗಳೂರು ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರ ಆಧಾರದ ಮೇಲೆ, ನಂತರದ ಕಾಲದಲ್ಲಿ ಬಂದ ಆಳ್ವಿಕೆಗಾರರು ಬೆಂಗಳೂರನ್ನು ಪೇಟೆಯಾಗಿ, ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಳೆಸಿದ್ದಾರೆ. ಈಗಂತೂ ನಮ್ಮ ರಾಜಧಾನಿಯು ಈ ಹಿರಿಮೆಗಳನ್ನೆಲ್ಲ ದಾಟಿ, ಜಪಾನಿನಿಂದ ಹಿಡಿದು ಅಮೆರಿಕದವರೆಗೂ ಎಲ್ಲರಿಗೂ ಗೊತ್ತಿರುವ ಒಂದು ‘ಕಾಸ್ಮೋಪಾಲಿಟನ್ ಸಿಟಿ’ ಆಗಿ, ಹೆಮ್ಮರದಂತೆ ಬೆಳೆದಿದೆ. ಯಲಹಂಕ ನಾಡಪ್ರಭುಗಳು ಎಂದು ಅವರನ್ನು ಗುರುತಿಸಿದರೂ ಅವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಬೆಂಗಳೂರು, ಮಾಗಡಿಯಿಂದ ಆಡಳಿತ ನಡೆಸಿದರು. ಬೆಂಗಳೂರು ಮಹಾನಾಡು ಅವರ ಕರ್ಮಕ್ಷೇತ್ರವಾಗಿತ್ತು. ಇವರು ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ಪ್ರದೇಶದ ಇಳವಂಜಿ ನಾಡಿನ ಆಡಳಿತಗಾರರು. ಅಚ್ಚಗನ್ನಡಿಗರಾದ ಅವರು ಕೃಷಿ ಮೂಲದ ಒಕ್ಕಲ ಮಕ್ಕಳು. ಆಹುತಿ, ಯಲಹಂಕ, ಬೆಂಗಳೂರು, ಮಾಗಡಿ ಇವರ ರಾಜಧಾನಿಗಳಾಗಿದ್ದವು. ಬೆಂಗಳೂರು ಕೆಂಪೇಗೌಡರಿಗಿಂತ ಹಿಂದೆಯೇ ಇವರ ವಂಶಸ್ಥರು ನಾಡಪ್ರಭುಗಳಾಗಿದ್ದವರು. ಆದರೆ, ಬೆಂಗಳೂರು ಕೆಂಪೇಗೌಡರು ಅಥವಾ ಹಿರಿಯ ಕೆಂಪೇಗೌಡರು ಯಲಹಂಕ ನಾಡಪ್ರಭುಗಳ ವಂಶದ ಅತ್ಯಂತ ದೂರದೃಷ್ಟಿಯ ಮತ್ತು ಮೇಧಾವಿಯಾಗಿದ್ದ ದೊರೆಗಳು.ಮಹಾ ಕನಸುಗಾರರಾಗಿದ್ದ ಕೆಂಪೇಗೌಡರು ತಮ್ಮ ಇಪ್ಪತ್ತೇಳನೇ ವಯಸ್ಸಿನಲ್ಲಿ ಬೆಂಗಳೂರು ಮಹಾನಗರ ನಿರ್ವಣಕ್ಕೆ ಕ್ರಿ.ಶ. 1537ರಲ್ಲಿ ನಾಂದಿ ಹಾಡಿದರು. ಅಲ್ಲಲ್ಲಿ ಗುಡ್ಡಗಳು, ಅನೇಕ ನದಿಮೂಲಗಳು, ಕೆರೆ ನಿರ್ವಣಕ್ಕೆ ಅಗತ್ಯವಾದ ಕಣಿವೆ ಪ್ರದೇಶ, ನಗರ ನಿರ್ಮಾಣಕ್ಕೆ ಸಮತಟ್ಟಾದ ಭೂಪ್ರದೇಶ, ಸಾಕಷ್ಟು ಮಳೆ ಬೀಳುವ ಮತ್ತು ಹಿತಕರ ಹವಾಗುಣ ಹೊಂದಿದ್ದ ಪ್ರದೇಶದಲ್ಲಿ ಕೆಂಪೇಗೌಡರು ನಗರ ನಿರ್ವಿುಸಲು ಯೋಜನೆ ರೂಪಿಸಿದರು. ಈ ಪ್ರದೇಶ ಉತ್ತರ- ದಕ್ಷಿಣ ಮತ್ತು ಪೂರ್ವ- ಪಶ್ಚಿಮವಾಗಿದ್ದ ವಾಣಿಜ್ಯ ಮಾರ್ಗಗಳ ಸಂಧಿಸ್ಥಳವಾಗಿತ್ತು. ಪೂರ್ವ ಮತ್ತು ಪಶ್ಚಿಮ ಕರಾವಳಿ ಕಡೆಯಿಂದ ಬರುತ್ತಿದ್ದ ವ್ಯಾಪಾರಿಗಳು, ಹತ್ತಿ, ರೇಷ್ಮೆ, ಆಹಾರ ಬೆಳೆಗಳು, ಕಬ್ಬಿಣದ ಅದಿರು ನಿಕ್ಷೇಪಗಳು ಹತ್ತಿರದಲ್ಲೇ ಇದ್ದ ಪ್ರದೇಶದಲ್ಲಿ ಬೆಂಗಳೂರು ಮಹಾನಗರ ನಿರ್ಮಾನದ ಕನಸು ಕಂಡ ಕೆಂಪೇಗೌಡರು ಬೇರೆಬೇರೆ ವೃತ್ತಿ, ಕಸುಬು, ವ್ಯಾಪಾರ ವಹಿವಾಟು ನಡೆಸುವ ಜನರು ವಾಸಿಸಲು ಯೋಗ್ಯವಾದ ಹಲವಾರು ಪೇಟೆ, ಉಪಪೇಟೆಗಳನ್ನು ನಿರ್ವಿುಸಿ, ಜನರ ಮತ್ತು ಸಂಪತ್ತಿನ ಸುರಕ್ಷತೆಗಾಗಿ ನಗರದ ಸುತ್ತ ಕೋಟೆ ನಿರ್ವಿುಸಿದರು. ಬೆಂಗಳೂರಿನ ಅಭಿವೃದ್ಧಿಗೆ ಹೊಸ ರೂಪು ತಂದ ಕೆಂಪೇಗೌಡರಿಗೊಂದು ಸಲಾಂ.