ಜೂ.30 : ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಮುರುಳ್ಯ ಉಪಕೇಂದ್ರದ ಸುರಕ್ಷಾಧಿಕಾರಿ ಶ್ರೀಮತಿ ಬಿ.ಟಿ. ಪೂವಮ್ಮ ನಿವೃತ್ತಿ

0

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಮುರುಳ್ಯ ಉಪಕೇಂದ್ರದ ಸುರಕ್ಷಾಧಿಕಾರಿ ಶ್ರೀಮತಿ ಬಿ.ಟಿ. ಪೂವಮ್ಮ ರವರು (ನಾಳೆ)ಜೂ.30 ರಂದು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅವರು ಒಟ್ಟು 35 ವರುಷ ‌ಸೇವೆ ಸಲ್ಲಿಸಿದ್ದಾರೆ.


ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರಿನ ದೊಡ್ಡತೋಟ ಉಪಕೇಂದ್ರಕ್ಕೆ ಆಯ್ಕೆಯಾಗಿ
ಸೇವೆಗೆ ಸೇರಿದ್ದು, ಅಲ್ಲಿ 24 ವರುಷ ಸೇವೆ ಸಲ್ಲಿಸಿದ್ದು.ಬಳಿಕ ವರ್ಗಾವಣೆ ಗೊಂಡು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಮುರುಳ್ಯ ಉಪಕೇಂದ್ರದಲ್ಲಿ 11 ವರುಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಲ್ಲಿದ್ದಾರೆ. ಅವರು ಮುರುಳ್ಯ ಗ್ರಾಮದ ಕಾಪುತ್ತಡ್ಕ ನಿವಾಸಿಯಾಗಿದ್ದು,
ಅವರ ಪತಿ ನಿವೃತ್ತ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಾಸುದೇವ ನಾಯಕ್, ಪುತ್ರ ಅಭಿಷೇಕ್, ಪುತ್ರಿ ಶ್ರೀಮತಿ ಅರ್ಚನಾ.