ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ಗಣಿತ ಶಿಕ್ಷಕರಾಗಿ ಹಾಗೂ ಪ್ರಸ್ತುತ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನರೇಂದ್ರ ಎಂ.ಆರ್.ರವರು ಸೇವೆಯಿಂದ ಜೂ.30ರಂದು ನಿವೃತ್ತಿ ಹೊಂದಿದ್ದಾರೆ.
ಇವರು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮುಂಡೋಡಿ ರಾಘವ ಗೌಡ ಮತ್ತು ಶ್ರೀಮತಿ ಮೋಹಿನಿ ದಂಪತಿಗಳ ಪುತ್ರ. ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ.ಕಿ.ಪ್ರಾ.ಶಾಲೆ ವಾಲ್ತಾಜೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ, ಪ್ರೌಢ ಶಿಕ್ಷಣವನ್ನು ಸಂತ ಫಿಲೋಮಿನಾ ಬಾಲಕರ ಪ್ರೌಢ ಶಾಲೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಪೂರೈಸಿ, ಪದವಿ ಶಿಕ್ಷಣವನ್ನು ಜೆ.ಎಸ್.ಎಸ್. ಕಾಲೇಜು ಮೈಸೂರು ಹಾಗೂ ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಶಿಕ್ಷಣವನ್ನು ಪಡೆದುಕೊಂಡು ಸ್ನಾತಕೋತ್ತರ ಪದವಿಯನ್ನು ಶ್ರೀ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ.
1987 ರಲ್ಲಿ ಪೆರಾಜೆ ಜ್ಯೋತಿ ಪ್ರೌಢ ಶಾಲೆ ಪೆರಾಜೆಯಲ್ಲಿ ಗಣಿತ ಶಿಕ್ಷಕರಾಗಿ ಹಾಗೂ ಪ್ರಸ್ತುತ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ . ತನ್ನ ಸುದೀರ್ಘ 36 ವರ್ಷಗಳ ಕಾಲದ ವೃತ್ತಿಯಿಂದ ಜೂ.30 ರಂದು ನಿವೃತ್ತಿಹೊಂದಿದ್ದಾರೆ.
ಇವರ ಪತ್ನಿ ಶ್ರೀಮತಿ ಹರಿಣಾಕ್ಷಿರವರು ಗೃಹಿಣಿಯಾಗಿದ್ದು, ಪುತ್ರಿ ಕು.ಸ್ಪಂದನಾ ಮಡಿಕೇರಿಯ ಸರಕಾರಿ ವೈದ್ಯಕೀಯ ವಿದ್ಯಾನಿಲಯದ ಎಂ.ಬಿ.ಬಿ.ಎಸ್ 3ನೇ ವರ್ಷದ ಪದವಿ ಪಡೆಯುತ್ತಿದ್ದಾರೆ. ಪುತ್ರ ಚಿರಾಗ್ ಸುಳ್ಯದ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವೀತಿಯ ಪಿ ಯು ಸಿ ವಿದ್ಯಾರ್ಥಿಯಾಗಿದ್ದಾರೆ.