ಭಾರೀ ಮಳೆಗೆ ಕೊಚ್ಚಿ ಹೋಗುತ್ತಿದೆ ಮಣ್ಣು; ರಸ್ತೆ ಅಗಲೀಕರಣದ ಅಲ್ಲಲ್ಲಿ ಮಣ್ಣು ಕುಸಿತ
ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಲ್ಲಿ ಬರೆ ಕುಸಿಯುತ್ತಿದೆ.
ಸೋಣಂಗೇರಿಯಲ್ಲಿ ಇತ್ತೀಚೆಗಷ್ಟೇ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಜೆಸಿಬಿ ಮೂಲಕ ಬರೆ ಸಮತಟ್ಟುಗೊಳಿಸುವ ಕೆಲಸ ಮಾಡಲಾಗಿತ್ತು. ಆದರೆ ಇದೀಗ ಮಳೆಗಾಲ ಪ್ರಾರಂಭಗೊಂಡಿದ್ದು, ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ನೂತನವಾಗಿ ಸರ್ಕಲ್ ನಿರ್ಮಾಣ ಮಾಡುವ ಸ್ಥಳ ಸಮೀಪದ ಬರೆಯಲ್ಲಿ ಮಣ್ಣು ಅಲ್ಲಲ್ಲಿ ಕುಸಿಯುತ್ತಿದೆ.