ಜಾಲ್ಸೂರು: ಭಾರೀ ಮಳೆಗೆ ಪ್ರಶಾಂತ್ ಬಾರ್ ಹಿಂಬದಿ ಬರೆ ಕುಸಿತ

0


ಜಾಲ್ಸೂರಿನ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಹಿಂಬದಿ ಬರೆ ಕುಸಿತಗೊಂಡಿರುವ ಘಟನೆ ಜು.6ರಂದು ಮಧ್ಯಾಹ್ನ ಸಂಭವಿಸಿದೆ.
ಭಾರೀ ಮಳೆಯಿಂದಾಗಿ ಬಾರ್ ನ ಹಿಂಭಾಗದಲ್ಲಿ ಬರೆ ಕುಸಿದಿದ್ದು, ಮಳೆ ನೀರು ಬಾರ್ ನ ಒಳಗಡೆ ನುಗ್ಗಿದ್ದು, ಸಮೀಪದಲ್ಲಿರುವ ಶೌಚಾಲಯಕ್ಕೂ ಹಾನಿ ಸಂಭವಿಸಿದೆ ಎಂದು ತಿಳಿದುಬಂದಿದೆ.