ಈ ವರ್ಷವೂ ಪೈಚಾರು-ಸೋಣಂಗೇರಿ ರಸ್ತೆಯ ಆರ್ತಾಜೆ ಮೋರಿ ಜಲಾವೃತ ಸಾಧ್ಯತೆ
ಸುಳ್ಯದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪೈಚಾರು-ಸೋಣಂಗೇರಿ ರಸ್ತೆಯ ಆರ್ತಾಜೆ ಮೋರಿ ಜಲಾವೃತಗೊಳ್ಳುವ ಸಾಧ್ಯೆತೆಯಿದೆ.
ಮೋರಿಯ ಮುಕ್ಕಾಲು ಭಾಗ ನೀರು ತುಂಬಿದ್ದು, ಇಂದು ನಿರಂತರ ಮಳೆ ಸುರಿದರೆ ರಸ್ತೆಯ ಮೇಲೆ ನೀರು ತುಂಬಿ ವಾಹನ ಸವಾರರು ಕಳೆದ ವರ್ಷದಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಹುದು.
ಇತ್ತೀಚೆಗೆ ರಸ್ತೆ ಅಭಿವೃದ್ಧಿ ಮಾಡಿದ ಸಂದರ್ಭದಲ್ಲಿ ಆರ್ತಾಜೆ ಮೋರಿಯನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ.