ಮೊಗ್ರದಲ್ಲಿ ಗ್ರಾಮ ಭಾರತ ತಂಡದಿಂದ ಶ್ರಮದಾನ

0

ಗುತ್ತಿಗಾರು ಗ್ರಾಮದ ಮೊಗ್ರದಲ್ಲಿ ಗ್ರಾಮ ಭಾರತ ತಂಡ ದ ಸದಸ್ಯರುಗಳಿಂದ ಮೋಗ್ರ ಶಾಲೆಯ ಹತ್ತಿರದ ಟ್ರಾನ್ಸ್ಫರ್ ನಿಂದ ಏರಣ ಗುಡ್ಡೆ ಟ್ರಾನ್ಸ್ಫರ್ ತನಕ, ವಿದ್ಯುತ್ ಲೈನಿಗೆ ತಾಗುವ ಮರದ ಕೊಂಬೆಗಳನ್ನು ಇಂದು ಕತ್ತರಿಸಲಾಯಿತು.

ಊರವರಾದ ವಸಂತ ಮೋಗ್ರ, ಗಣೇಶ್, ಬಂಸತ್, ಚರಣ್, ದೊಳ ಧರ್ಮ ಗೌಡ, ನೀಲಪ್ಪ, ಗಿರಿಯಪ್ಪ, ಯೋಗೀಶ್, ಪುಟ್ಟ ಯುವ, ದುಗ್ಗಣ್ಣ ಅಜಿಲ, ನವೀನ್ ಮುವ, ಶಶಿ ಮಾತೃಮಜಲ್ ಇದ್ದರು. ಲೈನ್ ಮ್ಯಾನ್ ಪಾಲಕ್ಷ ಸಹಕರಿಸಿದರು.