ಸದ್ದಿಲ್ಲದೆ ಸಿದ್ಧವಾಗಿದೆ ಸುಳ್ಯದ ಹುಡುಗರು ಸೇರಿ ನಿರ್ದೇಶಿಸಿದ “ದಾಮಾಯಣ” ಕನ್ನಡ ಸಿನಿಮಾ!

0

ಜು.14ರಂದು ಕರ್ನಾಟಕದಾಂದ್ಯತ ರೀಲಿಸ್

ಪಕ್ಕಾ ಮಂಗಳೂರು ಸೊಗಡಿನ ಕತೆ ಹೊಂದಿದ ಚಲನಚಿತ್ರ

ಸುಳ್ಯದ ಹುಡುಗರ ಕನಸಿನ ಕೂಸು, ತಿಳಿಹಾಸ್ಯದಿಂದ ಕೂಡಿರುವ “ದಾಮಾಯಣ” ಸಿನಿಮಾದ ಟ್ರೈಲರ್ ಜನರಲ್ಲಿ ಹೊಸ ನೀರಿಕ್ಷೆ ಮೂಡಿಸಿದ್ದು, ಚಿತ್ರವು ಜುಲೈ.14ರಂದು ಕರ್ನಾಟಕಾದ್ಯಂತ ರಿಲೀಸ್ ಆಗಲಿದೆ.

ಶ್ರೀಮುಖ ಸುಳ್ಯ ಚಿತ್ರ ನಿರ್ದೇಶನ ಮಾಡಿದ್ದು, ಸುಳ್ಯದವರೇ ಆದ ಅಕ್ಷಯ್ ರೇವಂಕರ್ ಸಹ ನಿರ್ದೇಶನ ಮಾಡಿದ್ದಾರೆ.

ಚಿತ್ರೀಕರಣವು ಮಂಗಳೂರು, ಸುಳ್ಯ, ಪುತ್ತೂರಿನ ಆಸುಪಾಸಿನ ಪರಿಸರದಲ್ಲಿ ನಡೆದಿದ್ದು, ದಾಮೋದರ ಎಂಬಾತನ ಹಾಸ್ಯದ ವ್ಯಕ್ತಿತ್ವವೇ ಸಿನಿಮಾದ ಹೈಲೈಟ್ಸ್.

ವಿಶೇಷವೆಂದರೆ ದಾಮೋದರನ ಪಾತ್ರವನ್ನು ಸ್ವತಃ ಚಿತ್ರದ ನಿರ್ದೇಶಕ ಶ್ರೀಮುಖ ಸುಳ್ಯ ನಿರ್ವಹಿಸಿದ್ದಾರೆ.

ದಾಮೋದರ ಎಂಬವನಿಗೆ ತಾನು ಪ್ರತಿಭಾವಂತ ಎಂಬ ಹೆಮ್ಮೆ. ಅಡಿಕೆ ಕದಿಯುವುದು, ಟಿಕ್‌ಟಾಕ್ ಮಾಡುವುದು ಅವನ ಚಾಳಿ. ಪೇಟೆಗೆ ಹೋಗಿ ಹೆಸರು ಮಾಡಬೇಕು ಎಂಬ ಬಯಕೆ ಇರುವ ಕತೆ ಚಿತ್ರದಲ್ಲಿದೆ.

ದಾಮಾಯಣ ಸಿನಿಮಾವು ನ್ಯೂ ಫಿಲ್ಮ್ ಮೇರ‍್ಸ್ ನ್ಯೂಯಾರ್ಕ್, ಮಿಯಾಮಿ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್, ‘ಪಿಕ್ ಯುವರ್ ಫ್ಲಿಕ್’ ಚಿತ್ರೋತ್ಸವ, ಬಿಹಾರದಲ್ಲಿ ನಡೆದೆ 7ನೇ ದರ್ಭಾಂಗ ಅಂತಾರಾಷ್ಟ್ರೀಯ ಚಿತ್ರೊತ್ಸವಕ್ಕೆ ಆಯ್ಕೆಗೊಂಡಿದ್ದು, ಒಟ್ಟು 112ನಿಮಿಷಗಳ ಈ ಚಿತ್ರವು ಐದು ಸಾಂದರ್ಭಿಕ ಹಾಡುಗಳನ್ನು ಹೊಂದಿದ್ದು, ‘ಸೆವೆಂಟಿ ಸೆವೆನ್ ಸ್ಟುಡಿಯೋಸ್’ನ ರಾಘವೇಂದ್ರ ಕುಡ್ವ ಚಿತ್ರದ ನಿರ್ಮಾಪಕರಾಗಿದ್ದಾರೆ.

ಟ್ರೈಲರ್ ಸನ್ನಿವೇಶಗಳಿಗೆ ಕೀರ್ತನ್ ಬಾಳಿಲ ಅವರ ಮ್ಯೂಸಿಕ್ ಮ್ಯಾಜಿಕಲ್ ಟಚ್ ನೀಡಿದೆ. ಛಾಯಾಗ್ರಾಹಕ ಸಿದ್ದು ಜಿ.ಎಸ್., ಸಂಕಲನಗಾರ ಕಾರ್ತಿಕ್ ಕೆ.ಎಂ., ಕಲರಿಸ್ಟ್ ಕಾರ್ತಿಕ್ ಮುರಲಿ, ಧನುಷ್ ಎಲ್.ಬೆದ್ರೆ ಹಾಗೂ ವಿ.ಎಫ್.ಎಕ್ಸ್. ಕಲಾವಿದ ಗುರುರಾಜ್ ತಮ್ಮ ಕೈಚಳಕ ತೋರಿಸಿದ್ದಾರೆ. ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಹೊಸ ಮುಖಗಳೇ ಆಗಿವೆ ಎನ್ನುವುದು ವಿಶೇಷ.

ಶ್ರೀಮುಖರವರು ಸುಳ್ಯದಲ್ಲಿ ಬುಟ್ಟಿಸ್ಟೋರ್ ಡಾಟ್ ಕಾಂಪ್ ಕಂಪೆನಿಯನ್ನು ನಡೆಸುತ್ತಿದ್ದಾರೆ. ಇವರು ಯಕ್ಷಗಾನ ಅರ್ಥಧಾರಿ, ಪ್ರತಿಭಾ ವಿದ್ಯಾಲಯದ ಪ್ರಾಂಶುಪಾಲರಾದ ವೆಂಕಟರಾಮ ಭಟ್ ಸುಳ್ಯ ಇವರ ಪುತ್ರ.