ಐವರ್ನಾಡು ಗ್ರಾಮ ಪಂಚಾಯತ್ ಗ್ರಾಮ ಸಭೆ

0

ಮೂಲಭೂತ ಸೌಕರ್ಯಗಳ ಬಗ್ಗೆ ಸುದೀರ್ಘ ಚರ್ಚೆ

ಲಂಚ,ಭ್ರಷ್ಟಾಚಾರ ಆಂದೋಲನದ ಫಲಕ ಅನಾವರಣ

ಐವರ್ನಾಡು ಗ್ರಾಮ ಪಂಚಾಯತ್ 2022-23 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು
ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರ ಅಧ್ಯಕ್ಷತೆಯಲ್ಲಿ ಜು.11 ರಂದು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.
ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಹಾನರವರು ನೋಡೆಲ್ ಅಧಿಕಾರಿಯಾಗಿದ್ದರು.


ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು ಮತ್ತು
ಸದಸ್ಯರಾದ ದೇವಿಪ್ರಸಾದ್ ಎಸ್.ಎನ್., ಶ್ರೀಮತಿ ನಳಿನಿ,ಶ್ರೀಮತಿ ಶಶಿಕಲಾ, ಶ್ರೀಮತಿ ಶರ್ಮಿಳಾ,ರಂಜನ್ ಮೂಲೆತೋಟ,ಶ್ರೀಮತಿ ಲೀಲಾವತಿ,ಚಂದ್ರಕಲಾ ಜೆ.ವಿ, ಸತೀಶ್ ಜಬಳೆ,ಯೋಗೀಶ್ ಕಲ್ಲಗದ್ದೆ,ಸುಂದರಲಿಂಗಂ, ಶ್ರೀಮತಿ ಮಮತಾ ಯು ಉಪಸ್ಥಿತರಿದ್ದರು.


ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ,ಕಾರ್ಯದರ್ಶಿ ತಿರುಮಲೇಶ್ವರರವರು ವರದಿ ಮಂಡಿಸಿದರು.
ಮಮತ ಉದ್ದಂಪಾಡಿ ಮತ್ತು ಬಳಗದವರು ಪ್ರಾರ್ಥಿಸಿದರು.
ಇಲಾಖಾಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು.