ಅನ್ಸಾರಿಯ ಎಜುಕೇಶನ್ ಸೆಂಟರ್ ಇದರ ವತಿಯಿಂದ ನಡೆದ ಮುತ್ತಹಲ್ಲಿಮ್ ಸಂಗಮ ಸಾಮಾಜಿಕ ಧುರೀಣ ಉದ್ಯಮಿ ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ ರವರು ಜಟ್ಟಿಪಳ್ಳ ರಸ್ತೆ ಅನ್ಸಾರಿಯ ಎಜುಕೇಶನ್ ಸೆಂಟರ್ ಹಿಂಬದಿಯಲ್ಲಿ ನೂತನವಾಗಿ ನಿರ್ಮಿಸಿದ ಹರ್ಲಡ್ಕ ವಿಲ್ಲಾ ಇದರ ಉದ್ಘಾಟನೆ ಸಮಾರಂಭಕ್ಕೆ ಅಗಮಿಸಿದ
ಕೇರಳದ ಮಲಪ್ಪುರo ಜಿಲ್ಲೆಯ ಮಅದ್ದೀನ್ ಅಕಾಡೆಮಿಯ ಸ್ಥಾಪಕರು, ಅಂತರಾಷ್ಟ್ರೀಯ ಭಾವೈಕ್ಯ ವೇದಿಕೆಯ ಮುಖ್ಯ ಸಲಹೆಗಾರರು ವಿಶೇಷ ಚೇತನ ಮಕ್ಕಳ ಅಶ್ರಯದಾತ ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ತಂಙಳ್ ಸುಳ್ಯ ಹರ್ಲಡ್ಕ ವಿಲ್ಲಾ ಹಾಗೂ ಮುತಅಲ್ಲಿo ಸಂಗಮ ಉದ್ಘಾಟಿಸಿ ದುವಾಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಮತ್ತು ಉಡುಪಿ,ಮತ್ತು ಚಿಕ್ಕಮಗಳೂರು ಜಿಲ್ಲೆಯ ಖಾಝಿಗಳಾದ ಅಬ್ದುಲ್ ರಹಿಮಾನ್ ಮುಸ್ಲಿಯಾರ್ (ಮಾಣಿ ಉಸ್ತಾದ್)ಅದೂರ್ ಮಜ್ಲಿಸ್ ಎಜುಕೇಶನ್ ಸೆಂಟರ್ ಸ್ಥಾಪಕರಾದ ಅಶ್ರಫ್ ತಂಙಳ್ ಅದೂರ್, ಎಸ್ ಎಂ ಎ ಜಿಲ್ಲಾಧ್ಯಕ್ಷ ಹದ್ದಾದ್ ತಂಙಳ್,
ದಾರುಲ್ ಹುದಾ ಎಜುಕೇಶನ್ ಸೆಂಟರ್ ಸ್ಥಾಪಕರಾದ ಹಸನುಲ್ ಅಹದಲ್ ತಂಙಳ್, ಇಸ್ಮಾಯಿಲ್ ಹಾದಿ ತಂಙಳ್,ಸಯ್ಯದ್ ಅಹ್ಮದ್ ಖಾಸಿಂ ತಂಙಳ್ ಕುಂಟಾರ್,ಸಯ್ಯದ್ ಕುಂಙಿಕೋಯ ತಂಙಳ್ ಸಹದಿ ಸುಳ್ಯ, ಸಯ್ಯದ್ ಝೈನುಲ್ ಅಬಿದೀನ್ ತಂಙಳ್,ಸಯ್ಯದ್ ಸಮೀಮ್ ತಂಙಳ್ ಕುಂಬೋಳ್, ಯೂನುಸ್ ಸಖಾಫಿ ವಯನಾಡ್,ಶೌಕತ್ ಆಲಿ ಸಖಾಫಿ,ಅಬ್ದುಲ್ ಖಾದರ್ ಮದನಿ ಪಳ್ಳಂಗೋಡ್,ಅನ್ಸಾರಿಯ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ,ಸರ್ಪುದ್ದೀನ್ ಸಹದಿ,ಅನ್ಸಾರಿಯ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ, ಉದ್ಯಮಿಗಳಾದ ಮುನಾಫ್ ಮಂಗಳೂರು, ಆಶಿಫ್ ಇಂದೋರ್,ಸುಳ್ಯ ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ, ಕೆಪಿಸಿಸಿ ವಕ್ತಾರ ಟಿ. ಎಂ. ಶಹೀದ್ ಗಾಂಧಿನಗರ ಜಮಾಅತ್ ಅಧ್ಯಕ್ಷ ಕೆ. ಎಂ. ಮುಸ್ತಫ,ಮೊಗರ್ಪಣೆ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಪುಡ್,ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ನಗರ ಪಂಚಾಯತ್ ಸದಸ್ಯರಾದ ಉಮ್ಮರ್ ಕೆ ಎಸ್, ರಿಯಾಜ್ ಕಟ್ಟೆಕ್ಕಾರ್ ಕಾಂಗ್ರೆಸ್ ಮುಖಂಡರಾದ ಎಂ ಎಸ್ ಮಹಮ್ಮದ್, ಶಾಹುಲ್ ಹಮೀದ್ ಕುತ್ತಮೊಟ್ಟೆ ಮೊದಲಾದವರು ಉಪಸ್ಥಿತರಿದ್ದರು. ಇಬ್ರಾಹಿಂ ಖಲೀಲ್ ತಂಙಳ್ ಸುಳ್ಯ ಭೇಟಿಯ ಸವಿನೆನಪಿಗಾಗಿ ತಂಙಳ್ ರವರನ್ನು ಲತೀಫ್ ಹರ್ಲಡ್ಕ ಹಾಗೂ ಬಾಬ ಹಾಜಿ ಎಲಿಮಲೆಯವರು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್ ನೌಶದ್,ಕಂಟ್ರಾಕ್ಟರ್ ಶರೀಫ್,ಉದ್ಯಮಿ ಮುನಾಫ್ ರವರನ್ನು ಅಭಿನಂದಿಸಿ ಗೌರವಿಸಲಾಯಿತು.
ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.