ಭಾರೀ ಮಳೆ : ತುಂಬಿ ಹರಿಯುತ್ತಿರುವ ಕುಮಾರಧಾರಾ

0

ಸುಬ್ರಹ್ಮಣ್ಯದ ಸ್ನಾನಘಟ್ಟ ಸಂಪೂರ್ಣ ಮುಳುಗಡೆ : ಸುಬ್ರಹ್ಮಣ್ಯ – ಪಂಜ ರಸ್ತೆಯೂ ಬ್ಲಾಕ್

ಎಸ್.ಡಿ.ಆರ್.ಎಫ್ , ಭದ್ರತಾ ತಂಡಗಳು ಸನ್ನದ್ದ; ಜನರಿಗೆ ಸೂಚನೆ

ಘಟ್ಟ ಪ್ರದೇಶಗಳ ಸಹಿತ ಸುಬ್ರಹ್ಮಣ್ಯ ಭಾಗಗಳಲ್ಲೂ ಭಾರೀ ಮಳೆಯಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ದ ಕುಮಾರಧಾರಾ ಸ್ನಾನಘಟ್ಟ ಇಂದು ಸಂಪೂರ್ಣ ಮುಳುಗಡೆಯಾಗಿದೆ.

ಸುಬ್ರಹ್ಮಣ್ಯ – ಮಂಜೇಶ್ವರ ರಸ್ತೆಯ ಪಂಜ ಭಾಗದ ಮೇಲೆಯೂ ನೀರು ಬಂದಿದ್ದು ರಸ್ತೆ ಸಂಚಾರಕ್ಕೆ ತಡೆಯುಂಟಾಗಿದೆ.

ಎಸ್.ಡಿ.ಆರ್.ಎಫ್ ತಂಡ ತಿಂಗಳ ಹಿಂದೆಯೇವ ಬಂದಿದ್ದು ಸಂಭಾವ್ಯ ಅಪಾಯ ಬಂದಲ್ಲಿ ಸನ್ನದ್ದವಾಗಿ ನಿಂತಿದೆ.

ಕುಮಾರಧಾರ ಸ್ನಾನ ಘಟ್ಟದ ಬಳಿ ಇರುವ ಲಗೇಜ್ ಕೊಠಡಿ, ಶೌಚಾಲಯ ಸೇರಿದಂತೆ ಎಲ್ಲವೂ ಮುಳುಗಡೆಯಾಗಿದೆ.


ಮಂಜೇಶ್ವರ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ನೀರು ನುಗ್ಗಿದ್ದು ರಸ್ತೆ ಬ್ಲಾಕ್ ಆಗಿದೆ. ಕುಮಾರಧಾರ ಸ್ನಾನ ಘಟ್ಟದ ಸುತ್ತಮುತ್ತಲ ಕೃಷಿ ತೋಟಗಳಿಗೆ ನೀರು ನುಗ್ಗಿರುವುದಾಗಿ ವರದಿಯಾಗಿದೆ.
ಬಿಸಿಲೆ,ಅಡ್ಡಹೊಳೆ,ಸೋಮವಾರಪೇಟೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆ ಹಿನ್ನಲೆಯಲ್ಲಿ ಕುಮಾರಧಾರಾ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಭದ್ರತಾ ಸಿಬ್ಬಂದಿಗಳು ಮುನ್ನೆಚ್ಚರಿಕೆ ವಹಿಸಿದ್ದು ಭಕ್ತರು ನೀರಿಗಿಳಿಯದಂತೆ ನೋಡಿಕೊಳ್ಳುತಿದ್ದಾರೆ.