ವಿದ್ಯಾರಶ್ಮಿಯಲ್ಲಿ ಸಿಇಟಿ/ಜೆಇಇ/ನೀಟ್ ಕೋಚಿಂಗ್ ಆರಂಭ

0

ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಇಂಟೆಗ್ರೇಟೆಡ್ ಸಿಇಟಿ/ಜೆಇಇ/ನೀಟ್ ಕೋಚಿಂಗ್ ಆರಂಭವಾಯಿತು.
ತರಬೇತಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಸವಣೂರು ಸೀತಾರಾಮ ರೈಯವರು ಬದಲಾಗುತ್ತಿರುವ ಜಗತ್ತಿನೊಡನೆ ನಾವೂ ಬದಲಾಗಬೇಕಿದೆ. ಹೆಚ್ಚು ಹೆಚ್ಚು ಸ್ಪರ್ಧಾತ್ಮಕವಾಗಿರುವ ಇಂದಿನ ದಿನಮಾನದಲ್ಲಿ ನಾವು ಉತ್ತಮ ಸ್ಥಾನ ಗಿಟ್ಟಿಸಬೇಕಾದರೆ ಇಂತಹ ತರಬೇತಿಗಳನ್ನು ಅಗತ್ಯವಾಗಿ ಪಡೆಯಲೇ ಬೇಕು ಎಂದರು. ಇಷ್ಟು ದಿನ ಹಳ್ಳಿಯ ಕಾಲೇಜಾದ ನಮ್ಮಲ್ಲಿ ಇಂತಹ ತರಬೇತಿಯ ಸೌಲಭ್ಯ ಇಲ್ಲ ಎಂಬ ಕೊರಗು ಇತ್ತು.

ಇಂದಿನ ದಿನ ಅಂತಹ ಕೊರಗು ಮುಕ್ತಾಯವಾಗಿದೆ. ನಮ್ಮ ವಿದ್ಯಾರ್ಥಿಗಳಿಗೆ ನಮ್ಮಲ್ಲೇ ಆಂತರಿಕ ವ್ಯವಸ್ಥೆಯೊಂದಿಗೆ ತರಬೇತಿ ನೀಡುವ ಕಾರ್ಯ ಇದಾಗಿದೆ ಎಂದು ಹೇಳಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಯೋಜನೆಗೆ ತಮ್ಮನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಅವರು ಶ್ಲಾಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ಮತ್ತು ಅದಕ್ಕೆ ತಯಾರಿಗಳ ವಿಧಾನಗಳನ್ನು ವಿಸ್ತತವಾಗಿ ವಿವರಿಸಿದರು. ಮುಂದಿನ ಆರು ವರ್ಷಗಳ ಕಾಲ ಕಷ್ಟಪಟ್ಟು ಓದಿ ಅಭ್ಯಾಸ ಮಾಡಿದರೆ ಜೀವನದ ಮುಂದಿನ ಅರುವತ್ತು ವರ್ಷಗಳ ಕಾಲ ಸುಖವಾಗಿರಬಹುದು ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳ ಜ್ಞಾನವೃದ್ಧಿಗಾಗಿ ನಾವು ಯಾವ ವ್ಯವಸ್ಥೆಯನ್ನಾದರೂ ಮಾಡಲು ಸಿದ್ಧ ಎಂದು ಹೇಳಿ ಪ್ರೋತ್ಸಾಹ ಸೂಚಿಸಿದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಪ್ರಾಂಶುಪಾಲ ಸೀತಾರಾಮ ಕೇವಳ, ಉಪಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ, ಸಂಯೋಜಕಿ ಕಸ್ತೂರಿ ಕೆ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಯಿಷತ್ ವಫಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಎಂಟನೆ ತರಗತಿಯ ವೈಷ್ಣವಿ ಮತ್ತು ಬಳಗದವರು ಸಂಸ್ಕೃತ ಶ್ಲೋಕೋಚ್ಛಾರ, ದ್ವಿತೀಯ ಪಿಯುಸಿಯ ಗೌತಮಿ ಭಾರತೀಯ ಸಂವಿಧಾನ ಪೀಠಿಕೆಯ ವಾಚನ, ಫಾತಿಮತ್ ಸನಾ ಸ್ವಾಗತ ಮತ್ತು ಕಾಲೇಜಿನ ವಿದ್ಯಾರ್ಥಿ ನಾಯಕ ದೀಪಕ್ ಬಿ.ಎಂ. ವಂದನಾರ್ಪಣೆಗಳನ್ನು ನಿರ್ವಹಿಸಿದರು.