ಸುಳ್ಯದಲ್ಲಿ ಹೆಚ್ಚುತ್ತಿರುವ ಕಳ್ಳರ ಹಾವಳಿ

0

ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್ ಬಳಿ ದ್ವಿಚಕ್ರವಾಹನವನ್ನು ನಿಲ್ಲಿಸಿ ಹೋಗುವವರು ಎಚ್ಚರ

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಹೋಗುವವರು ಇನ್ನು ಎಚ್ಚರ ವಹಿಸಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಸುಳ್ಯ ನಗರ ಮತ್ತು ಕಲ್ಲುಗುಂಡಿ, ಜಾಲ್ಸೂರು ಮುಂತಾದ ಭಾಗಗಳಲ್ಲಿ ಕಳ್ಳರ ಹಾವಳಿಗಳು ಹೆಚ್ಚಾಗಿದ್ದು ಕಳ್ಳತನದ ಬೇರೆ ಬೇರೆ ಘಟನೆಗಳು ಸಂಭವಿಸಿದೆ.


ಇದರ ನಡುವೆ ಸುಳ್ಯ ಬಸ್ಸು ನಿಲ್ದಾಣದ ಬಳಿಯಿಂದ ದ್ವಿಚಕ್ರ ವಾಹನಗಳ ಕಳ್ಳತನವೂ ಕೂಡ ನಡೆದಿದೆ.

ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಎಲ್ಲೆಂದರಲ್ಲಿ ದ್ವಿಚಕ್ರವಾಹನಗಳನ್ನು ನಿಲ್ಲಿಸಿ ಅದರ ವಾರಿಸುದಾರರು ಬೇರೆ ಬೇರೆ ಕೆಲಸಗಳ ನಿಮಿತ್ತ ತೆರಳುತ್ತಿದ್ದು ಕೆಲವೊಂದು ವಾಹನಗಳು ವಾರಗಟ್ಟಲೆ ನಿಂತ್ತಿರುವುದು ಕಂಡುಬರುತ್ತದೆ.

ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ನಿರ್ವಹಣೆಗೆ ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದೆ ರಾತ್ರಿ ಸಮಯ ಬೆಳಕಿನ ಕಿರಣಗಳು ಕೂಡ ಇಲ್ಲಿ ಕಡಿಮೆಯಾಗಿದ್ದು ಸುತ್ತಮುತ್ತಲಿನ ಪರಿಸರ ಕತ್ತಲೆಯಿಂದ ಕೂಡಿರುತ್ತದೆ.ಈ ಎಲ್ಲಾ ಕಾರಣಗಳಿಂದ ಕೆಲವು ಸಂದರ್ಭದಲ್ಲಿ ಇಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ವಾಗುವುದಕ್ಕೆ ಕಾರಣವಾಗಿದೆ ಎಂದು ಎನ್ನಲಾಗಿದೆ.

ಕೆಲವು ವಾಹನಗಳನ್ನು ಸಂಜೆ ಸಮಯದಲ್ಲಿ ತಂದು ನಿಲ್ಲಿಸಿದರೆ ಮತ್ತೆ ಅದರ ವಾರಿಸುದಾರರು ಬರುವುದು ಮಾರನೇ ದಿನ ಅಥವಾ ಎರಡು ದಿನ ಬಿಟ್ಟು ಇಲ್ಲಾ ವಾರಗಳೂ ಕಳೆದೂ ಆಗಿರುತ್ತದೆ.
ಅಲ್ಲಿಯವರೆಗೆ ಈ ವಾಹನಗಳಿಗೆ ಯಾವುದೇ ಭದ್ರತೆಗಳು ಇರುವುದಿಲ್ಲ ವಾಹನಗಳನ್ನು ನೋಡಿಕೊಳ್ಳುವವರು ಕೂಡ ಯಾರು ಇರುವುದಿಲ್ಲ.ರಾತ್ರಿ ಏಳು ಗಂಟೆಯ ಬಳಿಕ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದ ಜನ ವಿರಳವಾಗಿರುತ್ತಾರೆ.

ಕಳೆದ ಕೆಲವು ತಿಂಗಳುಗಳಿಂದ ಇಲ್ಲಿ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಇರುತ್ತಿದ್ದ ವಾಹನಗಳ ನಿಯಂತ್ರಕರು ಕೂಡ ಇದೀಗ ಕಂಡು ಬರುತ್ತಿಲ್ಲ. ಅವರಿದ್ದಾಗ ಏನಿಲ್ಲದಿದ್ದರೂ ಇಲ್ಲಿ ವಾಹನಗಳನ್ನು ತಂದು ಎಲ್ಲಂದರಲ್ಲಿ ನಿಲ್ಲಿಸಿ ಹೋಗುವವರನ್ನು ನಿಯಂತ್ರಣವಾದರೂ ಮಾಡುತ್ತಿದ್ದರು. ಇದೀಗ ಅದು ಕೂಡ ಅಲ್ಲಿ ಕಂಡು ಬರುತ್ತಿಲ್ಲ.

ರಾತ್ರಿ ಸಮಯದಲ್ಲಿ ಬಸ್ಸುಗಳೆಲ್ಲಾ ಮುಖ್ಯ ರಸ್ತೆಯಲ್ಲಿ ಬಂದು ನಿಲ್ಲುವ ಕಾರಣ ಬಸ್ಸಿಗಾಗಿ ಬರುವ ಪ್ರಯಾಣಿಕರು ಮತ್ತು ಬೇರಡೆಯಿಂದ ಬರುವ ಪ್ರಯಾಣಿಕರು ಬಸ್ಸು ನಿಲ್ದಾಣದ ಒಳಭಾಗಕ್ಕೆ ಬಾರದೆ ರಸ್ತೆಯಲ್ಲೇ ನಿಂತು ತಮ್ಮ ತಮ್ಮ ಬಸ್ಸುಗಳಿಗೆ ಕಾದು ಅಲ್ಲಿಂದ ಪ್ರಯಾಣಿಸುತ್ತಾರೆ.


ಈ ಎಲ್ಲಾ ಅಭದ್ರತೆಗಳು ಕಂಡುಬರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ವಾರಿಸುದಾರರುಗಳು ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯು ಕೂಡ ಮನವಿ ಮಾಡಿಕೊಂಡಿದೆ.


ಒಟ್ಟಿನಲ್ಲಿ ಸುಳ್ಯದ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಪುತ್ತೂರು ಹಾಗೂ ಇನ್ನಿತರ ಬಸ್ಸು ನಿಲ್ದಾಣಗಳಲ್ಲಿ ಡಿಪೋ ವತಿಯಿಂದ ನಿಯೋಜಿಸಲ್ಪಟ್ಟಿರುವ ಸೆಕ್ಯೂರಿಟಿ ಗಾರ್ಡ್ಸ್ ಗಳು,ಪಾರ್ಕಿಂಗ್ ವ್ಯವಸ್ಥೆಗಳನ್ನು ನೋಡಿಕೊಳ್ಳುವವರು ಇಲ್ಲಿಯೂ ಕೂಡ ಇದ್ದರೆ ಉತ್ತಮವಾಗಿರುತ್ತದೆ.