ಜಯನಗರ : ಜೇನುಗೂಡು ಸಂಘದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

0

ಸುಮಾರು 25ಕ್ಕೂ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಬೆಳೆಸಿದ ಜೇನುಗೂಡು ತಂಡ

ಜಯನಗರ ಜೇನುಗೂಡು ಸಂಘದ ವತಿಯಿಂದ ವಿವಿಧ ಫಲ ಪುಷ್ಪಗಳ ಗಿಡ ನೆಡುವ ಕಾರ್ಯಕ್ರಮ ಜುಲೈ 30 ರಂದು ಜಯನಗರ ಪರಿಸರದಲ್ಲಿ ನಡೆಯಿತು.
ಜಯನಗರ ಬ್ರಹ್ಮರ ಗಯಾ ಶ್ರೀ ಅಯ್ಯಪ್ಪ ದೇವಸ್ಥಾನ ವಠಾರದಿಂದ ಆರಂಭಗೊಂಡ ಈ ಕಾರ್ಯಕ್ರಮ ಜಯನಗರ ಮುಖ್ಯ ರಸ್ತೆಯ ಮೂಲಕ ಸಾಗಿ ಕೊರಂಬಡ್ಕ ಆದಿ ಮೊಗೇರ್ಕಳ ದೈವಸ್ಥಾನದ ಮುಂಭಾಗದಲ್ಲಿ ಸಮಾರೋಪಗೊಂಡಿತು.

ಮಾವು, ಕೆಂಡಸಂಪಿಗೆ, ಪಾರಿಜಾತ, ಬಿಲ್ಲವ ಪತ್ರೆ, ಮೇ ಫ್ಲವರ್, ಹತ್ತಿ, ನೀಮ್ ಗಿಡಗಳನ್ನು ಸೇರಿದ ಸುಮಾರು 25 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಗಿಡಗಳ ರಕ್ಷಣಾ ಜಾಲಿಗಳನ್ನು ಅಳವಡಿಸಲಾಯಿತು.
ಕಳೆದ ವರ್ಷ ಮಳೆಗಾಲದಲ್ಲಿ ನೆಟ್ಟಿರುವಂತಹ ಗಿಡಗಳ ರಕ್ಷಣಾ ಜಾಲಿಗಳ ದುರಸ್ತಿ ಕಾರ್ಯವನ್ನು ಕೂಡ ಮಾಡಲಾಯಿತು.


ಪ್ರತಿಯೊಂದು ಗಿಡಗಳ ರಕ್ಷಣಾ ಜಾಲಿಯಲ್ಲಿ ಸಂಘದ ಸದಸ್ಯರ ನಾಮಫಲಕವನ್ನು ಅಳವಡಿಸಿ ಗಿಡದ ಪಾಲನೆಯನ್ನು ಆ ಸದಸ್ಯರ ಜವಾಬ್ದಾರಿ ಗೆ ನೀಡುವ ಯೋಜನೆಯನ್ನು ಸಂಘದ ವತಿಯಿಂದ ರೂಪಿಸಲಾಗಿದೆ.
ಸುಮಾರು 30ಕ್ಕೂ ಹೆಚ್ಚು ಸದಸ್ಯರು ಗಿಡ ನೆಡುವ ಕಾರ್ಯದಲ್ಲಿ ಭಾಗವಹಿಸಿದ್ದರು.