ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘ ಇದರ ಮಾಸಿಕ ಸಭೆ ಜುಲೈ 30ರಂದು ಸುಳ್ಯದ ವಿಷ್ಣು ಸರ್ಕಲ್ ನಲ್ಲಿರುವ ಸಂಘದ ಸಬಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಂ. ಮಲ್ಲೇಶ್ ಬೆಟ್ಟಂಪಾಡಿ ವಹಿಸಿದ್ದರು. ಕಾರ್ಯದರ್ಶಿ ಜನಾರ್ದನ ದೋಳ ವರದಿ ವಾಚಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ಸತ್ಯನಾರಾಯಣ ಪೈಚಾರ್,ಪದಾಧಿಕಾರಿಗಳಾದ ನಾಗೇಶ್,ಹರೀಶ್, ರಘುನಾಥ,ಮಧುಚಂದ್ರ, ಧನಂಜಯ,ಕಮಲಾಕ್ಷ,
ಸದಸ್ಯರಾದ ಶಿವರಾಮ, ಶಿವಕುಮಾರ್,ಕಿರಣ್, ಉಪಸ್ಥಿತರಿದ್ದರು.


ಸಭೆಯಲ್ಲಿ ಚರ್ಚೆ ನಡೆದು ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ನಡೆಸಬೇಕಾದ ಕ್ರಿಯಾ ಯೋಜನೆಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ವಾಸುದೇವ ಜಲ್ಸೂರು ಸ್ವಾಗತಿಸಿ, ಕೋಶಾಧಿಕಾರಿ ಗೋಪಾಲ ನಡುಬೈಲು ವಂದಿಸಿದರು.