ಅಲೆಕ್ಕಾಡಿ ಶಾಲೆಯಲ್ಲಿ ಬೀಳ್ಕೊಡುಗೆ; ಸನ್ಮಾನ ಕಾರ್ಯಕ್ರಮ

0

ಮುರುಳ್ಯ ಅಲೆಕ್ಕಾಡಿ ಸ. ಉ.ಹಿ.ಪ್ರಾ ಶಾಲೆಯಲ್ಲಿ ಎಸ್. ಡಿ.ಎಂ.ಸಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮಧು ಯತೀಶ್ ( ಮಿಲ್ಕ್ ಮಾಸ್ಟರ್ ) ಹಾಗೂ ವರ್ಗಾವಣೆಗೊಂಡು ಬೇರೆ ಶಾಲೆಗೆ ಹೋಗುವ ಶ್ರೀಮತಿ ಪೂರ್ಣಿಮಾ.ಜೆ, ಹಾಗೂ ಶ್ರೀಮತಿ ಭುವನ ಬಿ.ಆರ್ ರವರ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವು ಜು.೩೧ ರಂದು ಶಾಲಾ ರಂಗಮಂದಿರದಲ್ಲಿ ನಡೆಯಿತು.

ಕೃಷಿಕ ಹಾಗೂ ಧಾನಿ ಕುದ್ಪಾಜೆ ಶಿವಪ್ಪಗೌಡ ಮುರುಳ್ಯ ದೀಪ ಪ್ರಜ್ವಲನೆ ಮಾಡಿದರು. ಶ್ರೀಮತಿ ಮಧು ಯತೀಶ್ ರವರನ್ನು ನಿವೃತ್ತ ಶಿಕ್ಷಕಿ ಜಾನಕಿ ವೆಂಕಪ್ಪಗೌಡ, ನಿವೃತ್ತ ಶಿಕ್ಷಕ ಸೀತಾರಾಮ ಗೌಡ, ಯತೀಂದ್ರನಾಥ ರೈ, ಸನ್ಮಾನಿಸಿ ಗೌರವಿಸಿದರು. ಶಿಕ್ಷಕಿ ಪ್ರಭಾವತಿ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ಪೂರ್ಣಿಮಾರವರ ಸನ್ಮಾನ ಪತ್ರ ವನ್ನು ಶಿಕ್ಷಕಿ ರಶ್ಮಿರವರು ವಾಚಿಸಿ. ನಿವೃತ್ತ ಯೋಧ ಸುಂದರ ಗೌಡ ಪಿ ಲಂಕುಜೆ, ನಿವೃತ್ತ ಶಿಕ್ಷಕಿ ಗಾಯತ್ರಿ ಭಟ್, ಸನ್ಮಾನಿಸಿ ಗೌರವಿಸಿದರು, ಶ್ರೀಮತಿ ಭುವನ ಬಿ.ಆರ್.ರವರ ಸನ್ಮಾನ ಪತ್ರವನ್ನು ಶಿಕ್ಷಕಿ ಭವಾನಿ ವಾಚಿಸಿ. ಧಾನಿ ಮಾಯಿಲಪ್ಪ ಗೌಡ ಮತ್ತು ಮುರುಳ್ಯ ಹಾಲು ಉತ್ಪಾದರಕ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ರೈಯವರು ಸನ್ಮಾನಿಸಿ ಗೌರವಿಸಿದರು.

ಮೂವರ ಅಭಿನಂದನಾ ಭಾಷಣವನ್ನು ಶಿಕ್ಷಕಿ ಶ್ರೀಮತಿ ನಳಿನಾಕ್ಷಿಯವರು ಮಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷ ಅವಿನಾಶ್ ದೇವರ ಮಜಲು ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ವೆಂಕಪ್ಪಗೌಡ ಆಲಾಜೆ, ನಿವೃತ ಉಪ ತಹಶಿಲ್ದಾರ್ ಜನಾರ್ಧನ ಪೂಜಾರಿ ಅಲೆಕ್ಕಾಡಿ, ನಿವೃತ್ತ ಮುಖ್ಯ ಶಿಕ್ಷಕ, ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಶಿಕ್ಷಕ ಪುರಸ್ಕೃತ ಬಾಲಕೃಷ್ಣ ಕೆ ಹೇಮಳ,

ನಿವೃತ್ತ ಬ್ಯಾಂಕ್ ಮ್ಯಾನೇಜರ್ ಚಂದ್ರಶೇಖರ ಮುರುಳ್ಯ, ಎಸ್. ಡಿ. ಎಮ್. ಸಿ ಉಪಾಧ್ಯಕ್ಷೆ ಹರ್ಷಿತ ಕರುಣಾಕರ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ನೂಜಾಡಿ,

ಸವಣೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲಿಂಗರಾಜು, ಶಾಲಾ ಮುಖ್ಯ ಗುರು ಶ್ರೀಮತಿ ಶಶಿಕಲಾ.ಬಿ ಪೂಜಾರಿ, ಎಣ್ಮೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ.ಕೆ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳು ವಿದಾಯ ಮಾತುಗಳನ್ನಾಡಿದರು. ಮೂವರಿಗೂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಸ್ಮರಣಕ್ಕೆ ಗೌರವರ್ಪಣೆ ಮಾಡಲಾಯಿತು.

ಶಾಲಾ ಶಿಕ್ಷಕ ವೃಂದ, ಎಸ್. ಡಿ.ಎಂ.ಸಿ, ಶಾಲಾ ಹಿತೈಷಿಗಳು, ಹಿರಿಯ ವಿದ್ಯಾರ್ಥಿ ಸಂಘದ ಮಕ್ಕಳ ಪೋಷಕರು, ಅಡುಗೆ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜಿಸಿದ್ದರು.

ವರ್ಗಾವಣೆಗೊಂಡ ಶಿಕ್ಷಕಿಯರು ಐದು ವಿಐಪಿ ಚಯರ್ ಕೊಡುಗೆಯಾಗಿ ನೀಡಿದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಸ್ವಾಗತಿಸಿದರು, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಮುಖ್ಯ ಶಿಕ್ಷಕಿ ಶಶಿಕಲಾ ಬಿ ಪೂಜಾರಿ ಪ್ರಸ್ತಾವನೆಗೈದರು. ಉಪನ್ಯಾಸಕ ಐತ್ತಪ್ಪ ಅಲೆಕ್ಕಾಡಿ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕಿ ಮಮತಾ ವಂದಿಸಿದರು.