ರಾಜ್ಯ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರ

0


ರಾಜ್ಯ ಒಕ್ಕಲಿಗರ ಸಂಘ (ರಿ) ಬೆಂಗಳೂರು, ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಅವರ ಸುಳ್ಯದ ಕಚೇರಿಯಲ್ಲಿ ನಡೆದ ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ೨೦೨೧-೨೦೨೨ ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ವಿಭಾಗದಲ್ಲಿ ಕ್ರಮವಾಗಿ ಶೇಕಡ 97 ಮತ್ತು ಶೇಕಡ 95 ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲುಹೊದಿಸಿ ಸ್ಮರಣಿಕೆ ನೀಡಿ ಹಾರ ಹಾಕಿ ತಲಾ ರೂ 5,೦೦೦ದಂತೆ ಪ್ರೋತ್ಸಾಹಧನದ ಚೆಕ್ ನೀಡಿ ಗೌರವಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾ ಪ್ರಸಾದ್ ಕೆ.ವಿ ರವರ ವಿಶೇಷ ಆಸಕ್ತಿ ಮತ್ತು ಮುತುವರ್ಜಿಯಿಂದ ದೊರೆತ ಈ ಪ್ರತಿಭಾ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ೮೭ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.


ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತಿನ ಮಾಜಿ ಅಧ್ಯಕ್ಷರಾದ ಎನ್.ಎ ರಾಮಚಂದ್ರ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಊರುಬೈಲು, ಕೆ.ವಿ.ಜಿ ದಂತಮಹಾವಿದ್ಯಾಲಯದ ಆಡಳಿತ ಪರಿಷತ್ ಸದಸ್ಯರಾದ ಡಾ. ಮನೋಜ್ ಕುಮಾರ್ ಅಡ್ಡಂತಡ್ಕ, ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆ.ವಿ.ಜಿ ಐ.ಟಿ.ಐ ಉಪ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಅಕಾಡೆಮಿ ಕಚೇರಿಯ ಲೆಕ್ಕಪತ್ರ ಅಧಿಕ್ಷಕರಾದ ಪದ್ಮನಾಭ ಕಾನಾವುಜಾಲು, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಡೀನ್ ಎಡ್ಮಿಶನ್ ಪ್ರೋ. ಬಾಲಪ್ರದೀಪ್ ಕೆ.ಎನ್, ಕಛೇರಿ ಅಧಿಕ್ಷಕರಾದ ನಾಗೇಶ್ ಕೊಚ್ಚಿ, ಕೆ.ವಿ.ಜಿ ಪವರ್ ಹೌಸ್ ಕಾರ್ಯನಿರ್ವಹಣಾ ಅಭಿಯಂತರರಾದ ವಸಂತ ಕಿರಿಬಾಗ, ಕೆ.ವಿ.ಜಿ ಐಟಿಐ ಕಚೇರಿ ಅಧಿಕ್ಷಕರಾದ ಭವಾನಿಶಂಕರ ಅಡ್ತಲೆ, ಕೆ.ವಿ.ಜಿ ಪಾಲಿಟೆಕ್ನಿಕ್ ಉದ್ಯೋಗಿ ಅರುಣ್ ಕುಮಾರ್ ಕುರುಂಜಿ, ಕಮಲಾಕ್ಷ ನಂಗಾರು, ಅಕಾಡೆಮಿ ಉದ್ಯೋಗಿ ಸ್ವಸ್ತಿಕ್ ಸುತ್ತುಕೋಟೆ ಇವರುಗಳು ಉಪಸ್ಥಿತರಿದ್ದರು.