ಮಂಗಳೂರಿನ ಬಿಜಾಯಿ ಪರಿಸರದ ಗುರು ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ಟ್ರಾವೆಲ್ ಮೇಳ ಸಂಸ್ಥೆಯು ಯಶಸ್ವಿ 5ನೇಯ ವರ್ಷವನ್ನು ಪೂರೈಸಿ ಆರನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.ಈ ಸಂಸ್ಥೆಯು ವಿವಿಧ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕ ಜನ ಮನ್ನಣೆಗೂ ಪಾತ್ರವಾಗಿದ್ದು ಅಲ್ಲದೆ ರೋಟರಿ ಇಂಟರ್ನ್ಯಾಷನಲ್ 3182 ಇದರ ಎರಡು ಕಾನ್ಫರೆನ್ಸ್ ಗಳು ಒಂದು ಯುರೋಪಿನಲ್ಲಿ 12 ದಿನಗಳ ಪ್ರವಾಸದೊಂದಿಗೆ ನಡೆದಿದ್ದು ಹಾಗೂ ಆಸ್ಟ್ರೇಲಿಯಾದ ಮೆಲ್ಬೋರ್ ನಲ್ಲಿ ಅಂತರಾಷ್ಟ್ರೀಯ ಕನ್ವೆನ್ಷನ್ ಮತ್ತು 12 ದಿನಗಳ ಪ್ರವಾಸ ಯಶಸ್ವಿಯಾಗಿ ನಡೆಸಿದ ಕೀರ್ತಿಯನ್ನು ಸಂಸ್ಥೆ ಪಡೆದುಕೊಂಡಿದೆ.ವಿದೇಶ ಪ್ರವಾಸಗಳ ನೂತನ ಯೋಜನೆಗಳನ್ನು ಸಂಸ್ಥೆಯ ವತಿಯಿಂದ ರೂಪಿಸಿದ್ದು ಯಾತ್ರಾ ಪ್ರೀಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.ವಿಮಾನಗಳಲ್ಲಿ ಹಾರುವುದು ಬಹುತೇಕರ ಕನಸಾಗಿದ್ದು ಸಾಹಸಿಗಳು ಪ್ರಪಂಚದ ಅನೇಕ ಸ್ಥಳಗಳನ್ನು ಅನ್ವೇಷಿಸಲು ತುದಿಗಾಲಲ್ಲಿ ನಿಲ್ಲುತ್ತಾರೆ. ಪ್ರವಾಸದ ಮೇಲೆ ಹೆಚ್ಚು ಒಲವು ಉಳ್ಳವರು ಹಾಗು ಬೇಸಿಗೆಯನ್ನು ಹಿಮ್ಮೆಟ್ಟಿಸಲು ಆಗಾಗ್ಗೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಯಾತ್ರಾ ಪ್ರೀಯರಿಗೆ ವಿವಿಧ ರಾಷ್ಟ್ರಗಳನ್ನು ಸಂದರ್ಶಿಸಲು ನೂತನ ಯೋಜನೆಗಳನ್ನು ಆಯೋಜಿಸಿದೆ.
ಭಾರತದಿಂದ ಬಜೆಟ್ ಸ್ನೇಹಿ ವಿದೇಶ ಪ್ರವಾಸ ಮಾಡಲು ಸೂಕ್ತವಾದ ದೇಶಗಳನ್ನು ಆಯ್ಕೆ ಮಾಡಿ ಅನುಕೂಲಕರವಾದ ವ್ಯವಸ್ಥೆಗಳನ್ನು ಕಲ್ಪಿಸಿ ಬಜೆಟ್ ಸ್ನೇಹಿ ಹೋಟೆಲ್, ರೆಸಾರ್ಟ್‌ಗಳಲ್ಲಿ ಹಾಯಾಗಿ ತಂಗಬಹುದಾದ ವ್ಯವಸ್ಥೆಗಳನ್ನು ಕಲ್ಪಿಸುತ್ತದೆ ಎಂದು ಅವರು ತಿಳಿಸಿದ್ದಾರೆ. ಯುರೋಪ್, ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್, ಜರ್ಮನಿ, ಸಿಡ್ಜರ್ಲ್ಯಾಂಡ್, ಇಟಲಿ, ಸಿಂಗಾಪುರ್ ಮಲೇಷ್ಯಾ, ಮುಂತಾದ ಸುಂದರ ರಾಷ್ಟ್ರಗಳ ಪ್ರವಾಸಗಳನ್ನು ಸಂಸ್ಥೆಯ ವತಿಯಿಂದ ಆಯೋಜಿಸಲಾಗುತ್ತದೆ. ಅಲ್ಲದೆ ಪ್ರವಾಸದಲ್ಲಿ ವಿಮಾನ, ವೀಸಾ,ವಸತಿ, ಊಟ, ಎಂಟ್ರಿ, ಟಿಕೆಟ್ ಮತ್ತು ಎಲ್ಲಾ ರೀತಿಯ ತೆರಿಗೆಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಸಂಸ್ಥೆಯ ವತಿಯಿಂದ ಉತ್ತರ ಭಾರತ, ಥೈಲ್ಯಾಂಡ್, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಈಜಿಪ್ಟ್, ಜೋರ್ಡಾನ್, ಹನಿಮೂನ್ ಪ್ರವಾಸಗಳು ಉತ್ತಮ ದರದೊಂದಿಗೆ ಲಭ್ಯವಿರುತ್ತದೆ ಎಂದು ಸಂಸ್ಥೆಯ ಮಾಲಕರಾದ ಆದರ್ಶ್ ಕ್ರಾಸ್ತ ಹಾಗೂ ಸಂಸ್ಥೆಯ ಮೇಲ್ವಿಚಾರಕರಾದ ಫಿಯೋನಾ ಮೊಲಿ ಲೋಬೊ ತಿಳಿಸಿದ್ದಾರೆ.