ಪಂಜ ಲಯನ್ಸ್ ಕ್ಲಬ್ ವತಿಯಿಂದ-ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ -ಸನ್ಮಾನ ಕಾರ್ಯಕ್ರಮ

0

   ಲಯನ್ಸ್ ಕ್ಲಬ್ ಪಂಜ ಹಾಗೂ ಸಂದ್ಯಾರಶ್ಮಿ ಮತ್ತು ಸಂಧ್ಯಾಚೇತನ ಸುಳ್ಯ ತಾಲೂಕು ಇವುಗಳ ಜಂಟಿ ಆಶ್ರಯದಲ್ಲಿ ಪಂಜ ವಲಯದ ಹಿರಿಯ ನಾಗರಿಕರ ಸಮ್ಮಿಲನ ಹಾಗೂ ಉಚಿತ ಆರೋಗ್ಯ ತಪಸಣಾ  ಶಿಬಿರ ಮತ್ತು ಸನ್ಮಾನ ಕಾರ್ಯಕ್ರಮ  

ಆ.6ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತರ ಸಂಘದ ಅಧ್ಯಕ್ಷರಾದ ಡಾI ಲ .ರಂಗಯ್ಯರವರು, ಸಂಧ್ಯಾ ನಿಕೇತನದ ಅಧ್ಯಕ್ಷ ಪ್ರಭಾಕರ್ ನಾಯರ್ ಪಂಜ ವಲಯದ ಸಂಯೋಜಕ ಲ. ಬಾಲಕೃಷ್ಣ ಗೌಡ ಕುದ್ವ, ಪಂಜ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪದ್ಮನಾಭ ರೈ ಉಪಸ್ಥಿತರಿದ್ದರು. ಪಂಜ ಆರೋಗ್ಯ ಕೇಂದ್ರದ ವೈದ್ಯಧಿಕಾರಿಗಳಾದ ಡಾI ಮಂಜುನಾಥ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಚಿತ ಆರೋಗ್ಯ ತಪಾಸಣಾ ನಡೆಸಿಕೊಟ್ಟರು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಲ.ಸಂತೋಷ್ ಜಾಕೆ, ನಿಕಟ ಪೂರ್ವಾಧ್ಯಕ್ಷ ಲ.ಪುರುಷೋತ್ತಮ ದಂಬೆಕೋಡಿ, ಕಾರ್ಯದರ್ಶಿ ಲ.ವಾಸುದೇವ ಮೇಲ್ಪಾಡಿ, ಕೋಶಾಧಿಕಾರಿ ಲ.ಆನಂದ ಗೌಡ ಜಳಕದ ಹೊಳೆ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಲ.ಸಂತೋಷ್ ಜಾಕೆ ಸ್ವಾಗತಿಸಿ, ಕಾರ್ಯದರ್ಶಿ ಲ.ವಾಸುದೇವ ಮೇಲ್ಪಡಿ ವಂದಿಸಿದರು. ಪ್ರಥಮ ಉಪಾಧ್ಯಕ್ಷ ಲ.ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.