ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣ : ನ್ಯಾಯ ಕೇಳಿ ಸುಳ್ಯದಲ್ಲಿ ಪ್ರತಿಭಟನೆ

0


ಸುಳ್ಯ ನಗರದಲ್ಲಿ ಬೃಹತ್ ಪಾದಯಾತ್ರೆ


ಸಾವಿರಾರು ಮಂದಿ ಭಾಗಿ


ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ನ್ಯಾಯ ಕೇಳಿ ಇಂದು ಬೆಳಿಗ್ಗೆ ನಿಂತಿಕಲ್ಲಿನಿಂದ ಆರಂಭಗೊಂಡ ವಾಹನ ಜಾಥಾ ಸುಮಾರು ೧೧.೩೦ರ ವೇಳೆಗೆ ಸುಳ್ಯ ನಗರ ಪ್ರವೇಶಿಸಿ ಜ್ಯೋತಿ ಸರ್ಕಲ್ ಬಳಿಯಿಂದ ಹೋರಾಟಗಾರ ಮಹೇಶ್ ತಿಮರೋಡಿ ನೇತೃತ್ವದಲ್ಲಿ ಸಾವಿರಾರು ಜನರು ನಗರದಲ್ಲಿ ಪಾದಯಾತ್ರೆ ಮೂಲಕ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಅಲ್ಲಿ ಮಹೇಶ್ ತಿಮರೋಡಿ ಬೃಹತ್ ಪ್ರತಿಭಟನಾ ಸಭೆಯನ್ನುದ್ಧೇಶಿಸಿ ಮಾತನಾಡಿದರು.


ಈ ಸಂದರ್ಭದಲ್ಲಿ ಸೌಜನ್ಯಾ ತಾಯಿ ಕುಸುಮಾವತಿ, ತಂದೆ ಚಂದಪ್ಪ ಗೌಡ, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಹೋರಾಟ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಡಿ.ಬಿ.ಬಾಲಕೃಷ್ಣ, ಸುಳ್ಯ ಗೌಡ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್,

ಹೋರಾಟ ಸಮಿತಿಯ ಸಂಯೋಜಕ ಎನ್.ಟಿ. ವಸಂತ, ಜಿ.ಪಂ. ಮಾಜಿ ಸದಸ್ಯೆ ಸರಸ್ವತಿ ಕಾಮತ್, , ಕಾರ್ಯಕ್ರಮ ಸಂಚಾಲಕ ಹರೀಶ್ ಕುಮಾರ್ ಹುದೇರಿ, ಪ್ರಶಾಂತ್ ಮುರುಳ್ಯ ಮೊದಲಾದವರು ಉಪಸ್ಥಿತರಿದ್ದರು. ಅಜಿತ್ ಐವರ್ನಾಡು ಕಾರ್ಯಕ್ರಮ ನಿರೂಪಿಸಿದರು.