ಸುಬ್ರಹ್ಮಣ್ಯ ಇನ್ನರ್‌ವೀಲ್ ಕ್ಲಬ್ ಆಟಿ ಆಚರಣೆ

0


ಸುಬ್ರಹ್ಮಣ್ಯ ಇನ್ನರ್‌ವೀಲ್ ಕ್ಲಬ್ ವತಿಯಿಂದ ಆ.5 ರಂದು ಆಟಿ ಆಚರಣೆ ನಡೆಯಿತು.
ಲಯನ್ಸ್ ಕ್ಲಬ್‌ನ ಅಧ್ಯಕ್ಷ ವೇದ ಶಿವರಾಂ ಅವರ ಏನೆಕಲ್ಲು ಮನೆಯಲ್ಲಿ ಆಚರಿಸಲಾಯಿತು.

ಆಟಿಯಲ್ಲಿ ಮಾಡುವ ವಿವಿಧ ಖಾದ್ಯಗಳನ್ನು ಪ್ರತಿಯೊಬ್ಬ ಸದಸ್ಯರು ಮನೆಯಲ್ಲಿ ಮಾಡಿ ತಂದು ಒಟ್ಟಿಗೆ ಸೇರಿ ಸಂತೋಷಕೂಟದೊಂದಿಗೆ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಸದಸ್ಯರುಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು .

ಹಾಗೂ ಆಟಿಯ ತಿಂಗಳಲ್ಲಿ ಹಾಡುವ ಪದಗಳು, ಆಟಗಳು, ನೃತ್ಯಗಳು ಆಚರಣೆಗೆ ಮೆರುಗು ತಂದಿತು. ಇನ್ನರ್‌ವೀಲ್ ಕ್ಲಬ್ ನ ಪೂರ್ವ ಅಧ್ಯಕ್ಷರುಗಳಾದ ಶೋಭಾ ಗಿರಿಧರ್, ಭಾರತಿ ದಿನೇಶ್, ಸಚಿತ ಗೋಪಾಲ್, ಸರೋಜಾ ಮಾಯಿಲಪ್ಪ, ಲೀಲಾ ವಿಶ್ವನಾಥ್ ,ಕ್ಲಬ್ ನ ಕಾರ್ಯದರ್ಶಿ ಶ್ರುತಿ ಮಂಜುನಾಥ್, ಸದಸ್ಯರುಗಳಾದ ವಿಮಲ ರಂಗಯ್ಯ, ಚಂದ್ರಾವತಿ ಹೊನ್ನಪ್ಪ, ಗೀತಾ ರವಿ ಕಕ್ಕೆ ಪದವ್ ,ಶ್ರೀಜಾ ಚಂದ್ರಶೇಖರ ನಾಯರ್ , ಸುನಿತಾ ನವೀನ್, ಸೋನು ಭಟ್, ಯಶ್ಮಿತಾ ಅತ್ಯಾಡಿ, ಹಾಗೂ ಸಾಹಿತ್ಯ ಪ್ರವೀಣ್ ಮುಂಡೋಡಿ ಮತ್ತಿತರರು ಇದ್ದರು.