ಸರಕಾರಿ ಪ್ರೌಢ ಶಾಲೆ ದುಗ್ಗಲಡ್ಕ ದಲ್ಲಿ ಸಿ. ಸಿ. ಆರ್. ಟಿ. ಗ್ರೂಪ್ ಸುಳ್ಯ ಇವರರು ಆಯೋಜಿಸಿದ ಜಾನಪದ ಕ್ರೀಡೆ, ಚೆನ್ನೆಮಣೆ ಆಟದ ಸ್ಪರ್ಧೆ ಯಲ್ಲಿ ತಾಲ್ಲೂಕಿನ ಹತ್ತು ಶಾಲೆಗಳು ಭಾಗವಹಿದ್ದವು. ಮೂರು ವಿಭಾಗದಲ್ಲಿ ವಿದ್ಯಾರ್ಥಿ ಗಳು ಭಾಗವಹಿಸಿದ್ದರು.
ವಿಜೇತ ವಿದ್ಯಾರ್ಥಿ ಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆ ಯಲ್ಲಿ ಸಿಸಿಆರ್ ಟಿ ಘಟಕ ಸುಳ್ಯ ದ ಅಧ್ಯಕ್ಷ ರಾದ ಚಿನ್ನಪ್ಪ ಗೌಡ ಪತ್ತುಕುಂಜ, ಕಾರ್ಯದರ್ಶಿ ಕೇಶವ ಸಿ. ಎ, ಚಿತ್ರಕಲಾ ಸಂಘ ದ ಅಧ್ಯಕ್ಷ ಮೋಹನ್ ಎಣ್ಮೂರು, ಪ್ರೌಢ ಶಾಲಾ ಶಿಕ್ಷಕರ ಸಂಘ ದ ಅಧ್ಯಕ್ಷ ಚಂದ್ರ ಚಂದ್ರಶೇಖರ, ಮುಖ್ಯ ಶಿಕ್ಷರಾದ ಸುರೇಶ್ ಕುಮಾರ್, ಸಿಆರ್ ಪಿ ಮಮತಾ, ನ.ಪಂ. ಮಾಜಿ ಅಧ್ಯಕ್ಷೆ ಶೀಲಾವತಿ ಮಾಧವ ಉಪಸ್ಥಿತರಿದ್ದರು.
ಸಮಾರಂಭದ ಉದ್ಘಾಟನೆ ಯನ್ನು ಸರಕಾರಿ ನೌಕರರ ಸಂಘದ ಅಧ್ಯಕ್ಷ ತೀರ್ಥರಾಮ್ ಹೊಸೋಳಿಕೆ ನೆರವೇರಿಸಿದರು.
ನ.ಪಂ. ಸದಸ್ಯೆ ಶ್ರೀಮತಿ ಶಶಿಕಲಾ ಬಹುಮಾನ ವಿತರಣೆಯನ್ನು ನಡೆಸಿಕೊಟ್ಟರು. ಶಿಕ್ಷರಾದ ಉದಯ್ ಕುಮಾರ್, ಉಣ್ಣಿಕೃಷ್ಣ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಶಿಕ್ಷಕರಾದ ಸುರೇಶ್ ಕುಮಾರ್ ಸ್ವಾಗತಿಸಿದರು.
ಫಲಿತಾಂಶ :
ಅರಸು – ಒಕ್ಕಲು ವಿಭಾಗದಲ್ಲಿ ಎಣ್ಮೂರು ಪ್ರೌಢಶಾಲೆಯ ಪಲ್ಲವಿ ಎಸ್. (ಪ್ರ), ಜಾಲ್ಸೂರು ಉ.ಹಿ.ಪ್ರಾ.ಶಾಲೆಯ ಚಿಂತನ್ ಡಿ (ದ್ವಿ), ಜಾಲ್ಸೂರು ಉ.ಹಿ.ಪ್ರಾ.ಶಾಲೆಯ ಜೀವಿತ್ (ತೃ), ಮೂಲೆ ಆಟ ವಿಭಾಗದಲ್ಲಿ : ದುಗ್ಗಲಡ್ಕ ಪ್ರೌಢಶಾಲೆಯ ತೇಜಸ್ವಿನಿ, ಬೆಳ್ಳಾರೆ ಕೆಪಿಎಸ್ ನ ಶರಧಿ (ದ್ವಿ), ಸುಳ್ಯ ಸಂತ ಜೋಸೆಫ್ ಪ್ರೌಢಶಾಲೆಯ ದಿಶಾಂತ್ (ಪ್ರ), ಸುಳ್ಯ.ಸ.ಪ.ಪೂರ್ವ ಕಾಲೇಜಿನ ಹಿಮಾದ್ರಿ (ದ್ವಿ), ಸುಳ್ಯ ಸೈಂಟ್ ಜೋಸೆಫ್ ಪ್ರೌಢಶಾಲೆಯ ಅಭಿರಾಮ್ (ತೃ) ಬಹುಮಾನ ಪಡೆದರು.