ಕಲ್ಮಡ್ಕ : ಗ್ರಂಥಪಾಲಕ ದಿನಾಚರಣೆ

0

ಭಾರತದ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಇವರ ಸ್ಮರಣಾರ್ಥ ಗ್ರಂಥಪಾಲಕ ದಿನಾಚರಣೆಯನ್ನು ಆ.12ರಂದು ಕಲ್ಮಡ್ಕ ಗ್ರಂಥಾಲಯದಲ್ಲಿ ಆಚರಿಸಲಾಯಿತು.

ಕಲ್ಮಡ್ಕ ಗ್ರಾಮ ಪಂಚಾಯತ್ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಮೋಹಿನಿ ಎಂ ದೀಪ ಬೆಳಗಿಸಿ ಉದ್ಘಾಟಿಸಿದರು.
ಗ್ರಂಥಪಾಲಕ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಪ್ರಥಮ ತನುಷ, ದ್ವಿತೀಯ ಗುರುಪ್ರಿಯಾ, ತೃತೀಯ ಬಹುಮಾನವನ್ನು ಪ್ರೀತಮ್ ಪಡೆದುಕೊಂಡರು. ಈ ಸಂರ್ಭದಲ್ಲಿ ಗ್ರಂಥಪಾಲಕಿ ಜಯ ಸಿ. ಕೆ, ಗ್ರಾಮ ಪಂಚಾಯತ್ ಸಿಬ್ಬಂದಿ ಶೇಷಪ್ಪ ಎಂ. ಗಿ, ಶಾಲಾ ಮಕ್ಕಳು ಭಾಗವಹಿಸಿದರು.