ಗ್ರಾ.ಪಂ.ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಅಜ್ಜಾವರ, ಗ್ರಾ.ಪಂ.ಅಜ್ಜಾವರ,
ಗ್ರಂಥಾಲಯ ಸಮಿತಿ ಅಜ್ಜಾವರ, ಶ್ರೀರಕ್ಷಾ ಸಂಜೀವಿನಿ ಸಂಘ ಗ್ರಾಮ ಮಟ್ಟದ ಒಕ್ಕೂಟ ಅಜ್ಜಾವರ, ಪ್ರತಾಪ ಯುವಕ ಮಂಡಲ ಅಜ್ಜಾವರ, ಚೈತ್ರ ಯುವತಿ ಮಂಡಲ ಅಜ್ಜಾವರ , ಶ್ರೀ ವಿಷ್ಣು ಯುವಕ ಮಂಡಲ ಮೇನಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ “ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ”
ಅಂಗವಾಗಿ ಗ್ರಂಥಾಲಯದಲ್ಲಿ ಡಾ.ಎಸ್.ಆರ್.ರಂಗನಾಥನ್ ಜನ್ಮ ದಿನ , ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು.
ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ದೀಪ ಬೆಳಗಿಸಿ ಉದ್ಛಾಟಿಸಿದರು. ಪಂಚಾಯತ್ ಉಪಾಧ್ಯಕ್ಷರಾದ ಲೀಲಾಮನಮೋಹನ್ ರವರು ಡಾ. ಎಸ್ ಆರ್.ರಂಗನಾಥನ್ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಗೋಪಿನಾಥ ಮೆತ್ತಡ್ಕ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಪ್ರಸಾದ್ ರೈ ಮೇನಾಲ, ರಾಹುಲ್ ಅಡ್ಪಂಗಾಯ, ರವಿರಾಜ್ ಕರ್ಲಪ್ಪಾಡಿ, ಗ್ರಂಥಾಲಯ ಸಮಿತಿ ಸದಸ್ಯರುಗಳು,ಮಹಿಳಾ ಸಾಹಿತಿಗಳಾದ ವಿಮಾರುಣ ಪಡ್ಡ೦ಬೈಲು, ಶ್ರೀ ವಿಷ್ಣು ಯುವಕ ಮಂಡಲದ ಅಧ್ಯಕ್ಷರಾದ ರಂಜಿತ್ ರೈ ಮೇನಾಲ, ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಚೈತ್ರ ಯುವತಿ ಮಂಡಲದ ಅಧ್ಯಕ್ಷರಾದ ಶಶ್ಮಿ ಭಟ್ ಆಜ್ಜಾವರ,ಸ೦ಜೀವಿನಿ ಸಂಘದ ಪ್ರೇರಕರಾದ ಜಯಶ್ರೀ ಬೇಲ್ಯ, ಸಂಘದ ಸದಸ್ಯರು,”ಓದುವ ಬೆಳಕು”ಮಕ್ಕಳು ಮತ್ತು ಪೋಷಕರು ಊರವರು ಉಪಸ್ಥಿತರಿದ್ದರು.
ಗ್ರಂಥಪಾಲಕರ ದಿನವಾದ ಆ.12 ರಂದು ಗ್ರಂಥಾಲಯಕ್ಕೆ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ ಬಸವನ ಪಾದೆಯವರು ಒಂದು ದೀಪವನ್ನು ಕೊಡುಗೆಯಾಗಿ ನೀಡಿದರು. ಗ್ರಂಥಾಲಯ “ಓದುವ ಬೆಳಕು” ಮಕ್ಕಳಾದ ಆದಿದೇವ್ ಎಂ.ಹಾಸ್ಪಾರೆ ಕಂಪ್ಯೂಟರ್ ಟೆಬಲ್ ಮತ್ತು ಆಯಿಷತ್ ರಝಾನ ಮೇನಾಲ
ಗ್ಲೋಬ್ (ಭೂಗೋಳ)ಇವರುಗಳು ತಮ್ಮ ಜನ್ಮ ದಿನದ ಪ್ರಯುಕ್ತ ಗ್ರಂಥಾಲಯಕ್ಕೆ ಕೊಡುಗೆ ನೀಡಿದರು. ಈ ಮಕ್ಕಳ ಜನ್ಮ ದಿನಾಚರಣೆಯನ್ನು ಗ್ರಂಥಾಲಯದಲ್ಲಿ ದೀಪ ಬೆಳಗಿಸಿ ಕೇಕ್ ಕತ್ತರಿಸಿ ಆಚರಿಸಲಾಯಿತು. ಕೇಕಿನ ಪ್ರಾಯೋಜಕರಾಗಿ ಪಂಚಾಯತ್ ಸದಸ್ಯರಾದ ಜಯರಾಮ ಅತ್ಯಡ್ಕ ಸಹಕರಿಸಿದ್ದರು. ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳ ಬಹುಮಾನ ಪ್ರಾಯೋಜಕರಾಗಿ ರಂಜಿತ್ ರೈ ಮೇನಾಲ ಸಹಕರಿಸಿದ್ದರು. ಭೋಜನದ ವ್ಯವಸಯನ್ನು ಪ್ರತಾಪ ಯುವಕ ಮಂಡಲ ,ಚೈತ್ರ ಯುವತಿ ಮಂಡಲ,ಸಂಜೀವಿನಿ ಸಂಘ ವತಿಯಿಂದ ಆಯೋಜಿಸಿದ್ದರು.
ಪ್ರಾರ್ಥನೆ ಸ.ಪ್ರೌ.ಶಾಲೆ ಅಜ್ಜಾವರದ ಮಕ್ಕಳು ಮಾಡಿದರು.ನಿ ರೂಪಣೆ ಮತ್ತು ಸ್ವಾಗತವನ್ನು ಲೀಲಾಮನಮೋಹನ ಮಾಡಿದರು.ಧನ್ಯವಾದ ಲಕ್ಷ್ಮಿ.ಕೆ ಮಾಡಿದರು. ಪಂಚಾಯತ್ ಸಿಬ್ಬಂದಿ ಕಾರ್ತಿಕ್ ಸಹಕರಿಸಿದರು.