ಆ.27 ರಂಗಮನೆಯಲ್ಲಿ ಯಕ್ಷ ಸಂಭ್ರಮ

0

ವನಜ ರಂಗಮನೆ ಪ್ರಶಸ್ತಿ ಪ್ರದಾನ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಸುಳ್ಯ ಇದರ ಆಶ್ರಯದಲ್ಲಿ ಆ.27 ರಂದು  ಭಾನುವಾರ ಯಕ್ಷ ಸಂಭ್ರಮ 2023 ಹಾಗೂ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ಇವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಜಿ.ರಾಜೇಶ್  ಮುಖ್ಯ ಅತಿಥಿಯಾಗಿದ್ದು , ಹಿರಿಯ ಯಕ್ಷಗಾನ ಕಲಾವಿದರಾದ ಸುಜನಾ ಸುಳ್ಯರವರು ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ರಂಗಮನೆಯ ಮಾತೃಶ್ರೀ ವನಜಾಕ್ಷಿ ಜಯರಾಮ ಇವರ ನೆನಪಿನಲ್ಲಿ ನೀಡುವ 2022  ಹಾಗೂ 2023 ನೇ ವರ್ಷದ ವನಜ ರಂಗಮನೆ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಗುರುಗಳಾದ ವಿಶ್ವ ವಿನೋದ ಬನಾರಿ ಹಾಗೂ ವಳಕುಂಜ ಕುಮಾರ ಸುಬ್ರಹ್ಮಣ್ಯ ಇವರಿಗೆ ನೀಡಿ ಗೌರವಿಸಲಾಗುವುದು.

ಯಕ್ಷ ಸಂಭ್ರಮ- 2023

ಸಂಜೆ: 5.45 ಕ್ಕೆ ಸುಜನಾ ಯಕ್ಷ ಶಿಕ್ಷಣ ಕೇಂದ್ರದ ಹತ್ತು ಜನ ಪ್ರತಿಭಾನ್ವಿತ ಕಲಾವಿದರಿಂದ ಗುರು ಕುಮಾರ ಸುಬ್ರಹ್ಮಣ್ಯ ಇವರ ನಿರ್ದೇಶನದಲ್ಲಿ

ಚೆಂಡೆ-ಮದ್ದಳೆ ಝೇಂಕಾರ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.

ಸಂಜೆ: 6.10 ರಿಂದ ಕಾರ್ಕಳ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಯಕ್ಷ ಸಂಗಮ ಕಲಾವಿದರಿಂದ , ಪ್ರಸಿದ್ಧ ಅರ್ಥದಾರಿ ಮಧೂರು  ವಾಸುದೇವ ರಂಗ ಭಟ್ ರಚಿಸಿದ, ನಾಟ್ಯಗುರು ರಕ್ಷಿತ್ ಶೆಟ್ಟಿ ಪಡ್ರೆ ನಿರ್ದೇಶಿಸಿದ  ಶರಣ ಸೇವಾ ರತ್ನ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಭಾಗವತರಾಗಿ ಚಿನ್ಮಯ ಭಟ್ ಕಲ್ಲಡ್ಕ, ಮದ್ದಳೆಯಲ್ಲಿ ಲವಕುಮಾರ್ ಐಲ, ಚೆಂಡೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ, ಚಕ್ರತಾಳದಲ್ಲಿ ಪ್ರಥಮ ಮೂಡಿತ್ತಾಯ ಸಹಕರಿಸಲಿದ್ದಾರೆ.

ನಂತರ 7.10 ರಿಂದ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ರಾತ್ರಿ 8.10 ರಿಂದ ರಾತ್ರಿ 9.10 ರ ವರೆಗೆ ಮೂಡುಬಿದಿರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರಿಂದ, ಬೊಟ್ಡಿಕೆರೆ ಪುರುಷೋತ್ತಮ ಪೂಂಜ ವಿರಚಿತ, ಪ್ರಸಾದ್ ಚೇರ್ಕಾಡಿ ಮತ್ತು ಆದಿತ್ಯ ಅಂಬಲಪಾಡಿ  ನಿರ್ದೇಶನದ ನರ ಶಾರ್ದೂಲ ಎಂಬ ಯಕ್ಷಗಾನವನ್ನು ಏರ್ಪಡಿಸಲಾಗಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಚೇತನ್ ಸಚ್ಚರಿಪೇಟೆ, ಮದ್ಧಳೆಯಲ್ಲಿ ಮಯೂರ ನಾಯ್ಗ, ಚೆಂಡೆಯಲ್ಲಿ ಸವಿನಯ ನೆಲ್ಲಿತೀರ್ಥ ಹಾಗೂ ಚಕ್ರತಾಳದಲ್ಲಿ ಪ್ರಹ್ಲಾದ್ ಮೂರ್ತಿ ಸಹಕರಿಸಲಿದ್ದಾರೆ.

ಎರಡೂ ಯಕ್ಷಗಾನಗಳೂ ಅನೇಕ ಪ್ರಶಸ್ತಿಗಳನ್ನು ಪಡೆದ ರಂಗ ಶಿಸ್ತಿನ ವಿಶೇಷ ಪ್ರದರ್ಶನಗಳಾಗಿರುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ರಂಗಮನೆ ಅಧ್ಯಕ್ಷರಾದ ಡಾ| ಜೀವನ್ ರಾಂ ಸುಳ್ಯ ತಿಳಿಸಿರುತ್ತಾರೆ.