ಅರಂಬೂರು ಹಿದಾಯತುಲ್ ಇಸ್ಲಾಂ ಮದ್ರಸಾ ಸಂಸ್ಥೆಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸ್ಥಳೀಯ ಖತೀಬರಾದ ಮುಈನುದ್ದೀನ್ ಫೈಝಿಯವರ ದುವಾದಕ್ಕಾಗಿ ಆರಂಭಿಸಿ,ಜಮಾಅತಿನ ಅಧ್ಯಕ್ಷರಾದ ಬಾಷಾ ಸಾಹೇಬ್ ಧ್ವಜಾರೋಹಣವನ್ನು ನೇರವೇರಿಸಿದರು.ತದನಂತರ ರಾಷ್ಟ್ರಗೀತೆಯನ್ನು ಹಾಡಲಾಯಿತು.
ಬಳಿಕ ಬಾಪು ಸಾಹೇಬ್ ಅರಂಬೂರು ದಿಕ್ಸೂಚಿ ಭಾಷಣವನ್ನು ನಡೆಸಿ ಸ್ಥಳೀಯ ಖತೀಬರು ಭಾಷಣ ಮಾಡಿದರು.ಯೂಸುಫ್ ಅಂಜಿಕ್ಕಾರ್ ಆಶಯ ಭಾಷಣ ಮಾಡಿದರು.ಸ
ಭೆಯಲ್ಲಿ ಹಿರಿಯರು ಗಣ್ಯರು ಯುವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಗಳ ಬಹುಮಾನವನ್ನು ಎಸ್ ಸಂಶುದ್ದೀನ್ ಅರಂಬೂರು ವಿತರಿಸಿದರು. ಜೊತೆ ಕಾರ್ಯದರ್ಶಿ ಕಮಾಲ್ ಸೇರಿದ ಸರ್ವರಿಗೂ ವಂದನಾರ್ಪಣೆಯನ್ನು ಮಾಡಿದರು.