ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಶ್ರೀ ಮಹಾವಿಷ್ಣು ದೇವಸ್ಥಾನದ ಮುಂಭಾಗದಲ್ಲಿ ಕೊಡಿಯಡ್ಕ ಚಂದ್ರಶೇಖರ ಗೌಡರ 28 ವರ್ಷಗಳಿಂದ ಯಾವುದೇ ಕೃಷಿ ಮಾಡದೆ ಹಡಿಲು ಇದ್ದ ಗದ್ದೆಯಲ್ಲಿ ಆಗಸ್ಟ್ 14ರಂದು ನಾಗಶ್ರೀ ಸಂಜೀವಿನಿ ಸಿಬ್ಬಂದಿಗಳ ವತಿಯಿಂದ ನೇಜಿ ನಾಟಿ ಮಾಡಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷ ನೀಲಾವತಿ ತೋಟ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಮಟ್ಟದ ನಾಗಶ್ರೀ ಒಕ್ಕೂಟ, ಮುರುಳ್ಯ ಹಿಂದೂ ಬಾಂಧವರು, ಮುರುಳ್ಯ ಅವಳಿ ದೇವಸ್ಥಾನಗಳ ಆಶಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗದ್ದೆಯ ಮಾಲಕ ಚಂದ್ರಶೇಖರ ಗೌಡರು ದೀಪ ಪ್ರಜ್ವಲನೆ ಮಾಡಿದರು.
ಇಂದು ಬಾಂಧವರ ಸಮಿತಿಯ ಅಧ್ಯಕ್ಷ ಅನುಪ್ ಬಿಳಿಮಲೆ, ಕಾರ್ಯದರ್ಶಿ ವಸಂತ ಪೂದೆ, ದೇವಸ್ಥಾನದ ಅಧ್ಯಕ್ಷರುಗಳಾದ ಭುವನೇಶ್ವರ ಪೂದೆ ಮತ್ತು ಪದ್ಮನಾಭ ಪೂದೆ, ಪಂಜ ಕೃಷಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸುಹಾಸ್ ರವರು ಭತ್ತ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ ಶ್ರೀಮತಿ ಶ್ವೇತಾ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಸೌಲಭ್ಯ ಸೌಲಭ್ಯಗಳ ಬಗ್ಗೆ ವಿವರಿಸಿದರು. ತಾಲೂಕು ಬಿ ಆರ್ ಪಿ ಜಯಲಕ್ಷ್ಮಿ ಶುಭ ಹಾರೈಸಿದರು. ತಾರಾನಾಥ ಪೂದೆ ಚೆನ್ನಯ್ಯ ಮಜಲು, ಸಂಜೀವಿ ಒಕ್ಕೂಟದ ಸದಸ್ಯರು, ಹಿಂದೂ ಬಾಂಧವರು ಪೂದೆ, ಯುವಕರ ತಂಡ ಪೂದೆ, ಗ್ರಾಮಸ್ಥರು ಸಹಕರಿಸಿದರು.
ಈ ಸಂದರ್ಭದಲ್ಲಿ ಗಣಪತಿ ಸಂಜೀವಿನಿ ಸಂಘ ಪೂದೆ ಇದರ ಸದಸ್ಯರು ಇನ್ನೊಂದು ಗದ್ದೆಯ ನೇಜಿ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಎಂಬಿಕೆ ಶೈಲಜಾ ರೈ ಪ್ರಸ್ತಾವನೆಗೈದರು. ಕೃಷಿ ಸಖಿ ಶಶಿಕಲಾ ಸ್ವಾಗತಿಸಿದರು ಶ್ರೀಮತಿ ಚಂದ್ರಕಲಾ ಪ್ರಾರ್ಥಿಸಿದರು.
ಪಶು ಸಖಿ ಗೀತಾ ಕಳತ್ತಜೆ ವಂದಿಸಿದರು. ಕೃಷಿ ಉದ್ಯೋಗ ಸಖಿ ನೇತ್ರಾವತಿ ಗೊಳ್ತಿಲ ಕಾರ್ಯಕ್ರಮ ನಿರೂಪಿಸಿದರು.