ಜಯಕರ ಮಡ್ತಿಲರಿಗೆ ಗೌರವ ಲೆಫ್ಟಿನೆಂಟ್ ಆಗಿ ಪದೋನ್ನತಿ

0

ಭಾರತೀಯ ಭೂಸೇನೆಯಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಜಯಕರ ಮಡ್ತಿಲರು ಗೌರವ ಲೆಫ್ಟಿನೆಂಟ್ ಆಗಿ ಪದೋನ್ನತಿಗೊಂಡಿದ್ದಾರೆ.
ಐವರ್ನಾಡು ಗ್ರಾಮದ ಮಡ್ತಿಲ ದಿ.ದುಗ್ಗಪ್ಪ ಗೌಡ ಮತ್ತು ರೇವತಿ ದಂಪತಿಗಳ ಪುತ್ರರಾಗಿರುವ ಜಯಕರರು ೧೯೯೫ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದರು.


ಆರಂಭದಲ್ಲಿ ಪುಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಇವರು, ಬಳಿಕ ಸಿಕ್ಕಿಂ, ಜಮ್ಮು ಕಾಶ್ಮೀರ, ಸಿಮ್ಲಾ, ಬೆಳಗಾಂ, ಚಂಡೀಗಡ, ಗೋವಾ, ಅಸ್ಸಾಂನಲ್ಲಿ ಸೇವೆ ಸಲ್ಲಿಸಿದರು. ೨೦೦೦ ರಲ್ಲಿ ಲಾನ್ಸ್ ನಾಯಕ್ ಆಗಿ ಭಡ್ತಿ ಪಡೆದ ಇವರು, ೨೦೦೨ರಲ್ಲಿ ನಾಯಕ್ ಆಗಿ, ೨೦೦೯ರಲ್ಲಿ ಹವಾಲ್ದಾರ್, ೨೦೧೫ರಲ್ಲಿ ನ್ಯಾಬ್ ಸುಬೇದಾರ್ ಆದರು. ೨೦೧೯ರಲ್ಲಿ ಸುಬೇದಾರ್ ಆಗಿ ಪದೋನ್ನತಿಗೊಂಡರು. ಮುಂಬಯಿಯಲ್ಲಿ ಸೇವೆಯಲ್ಲಿರುವ ಇವರು 77 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಗೌರವ ಲೆಫ್ಟಿನೆಂಟ್ ಆಗಿ ಪದೋನ್ನತಿಗೊಂಡಿದ್ದಾರೆ.


ಪ್ರಸ್ತುತ ಉಬರಡ್ಕ ಮಿತ್ತೂರು ಗ್ರಾಮದ ಕಟ್ಟಕೊಚ್ಚಿಯಲ್ಲಿ ಮನೆ ಮಾಡಿದ್ದಾರೆ. ಪತ್ನಿ ಶ್ರೀಮತಿ ಧನಲಕ್ಷ್ಮಿ ಉಬರಡ್ಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ. ಪುತ್ರಿ ಶಿಬಾನಿ ಎಂ.ಜೆ. ಕೆ.ವಿ.ಜಿ. ಐಪಿಎಸ್. ನಲ್ಲಿ ಓದುತ್ತಿದ್ದಾರೆ.