ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ, ಮಂದಿರದ ಆಡಳಿತ ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ ಸಂಕ್ರಮಣ ಪೂಜೆ ಹಾಗೂ ದುರ್ಗಾಪೂಜಾ ಕಾರ್ಯಕ್ರವು ಆ.19 ರಂದು ನಡೆಯಿತು.
ಗಣಪತಿ ಹವನದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮವು, ದೀಪರಾಧನೆಯೊಂದಿಗೆ ಸಾಗಿತು. ಶ್ರೀ ಭಕ್ತವೃಂದ ಕಲ್ಲಡ್ಕ ಪೆರಾಜೆ ಇವರುಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಲದ ಸೇವಾ ಬಾಬ್ತು ದುರ್ಗಾಪೂಜೆಯನ್ನು ಕೊಡಗಿನ ಶಿಕ್ಷಕಿ ಶ್ರೀಮತಿ ಉಷಾರಾಣಿ ತಳೂರು ಅವರ ಕುಟುಂಬದ ಪರವಾಗಿ ನೆರವೇರಿಸಲಾಯಿತು.
ನಂತರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಲೋಕನಾಥ ಅಮ್ಚೂರು ಅವರನ್ನು ಶ್ರೀಕ್ಷೇತ್ರದ ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾದ ಶಿವಪ್ರಕಾಶ್ ಅಡ್ಪಂಗಾಯರು ಫಲ, ಪುಷ್ಪ, ಸ್ಮರಣಿಕೆಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಶ್ರೀ ದೇವರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಈ ಸಲದ ಅನ್ನದಾನದ ಸೇವೆಯನ್ನು ಸುಳ್ಯದ ಖ್ಯಾತ ಸಿವಿಲ್ ಇಂಜಿನಿಯರ್ ಶ್ಯಾಮಪ್ರಸಾದ್ ಅಡ್ಡಂತಡ್ಕ (ಶ್ರೀಪಾದ) ರವರು ಒದಗಿಸಿಕೊಟ್ಟರು.