ಕನಕಮಜಲಿನ ನಿವೇದಿತಾ ಸಂಚಾಲನಾ ಸಮಿತಿಯ ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮವು ಶ್ರೀಮತಿ ಮೀನಾಕ್ಷಿ ಆನಂದ ಗೌಡ ಪಲ್ಲತ್ತಡ್ಕ
ಅವರ ಮನೆಯಲ್ಲಿ ಆ.20ರಂದು ನಡೆಯಿತು.
ಯತೀಶ್ ಆರ್ವಾರ್ ಅವರು ಭಾರತ್ ಮಾತಾ ಪೂಜನ ಬೌದ್ಧಿಕ ನೀಡಿದರು. ವೇದಿಕೆಯಲ್ಲಿ ಸಂಚಾಲನಾ ಸಮಿತಿಯ ಸಂಚಾಲಕಿ ಶ್ರೀಮತಿ ಪೂರ್ಣಿಮಾ ಮಾಣಿಕೋಡಿ ಉಪಸ್ಥಿತರಿದ್ದರು.
ಸಮಿತಿ ಸದಸ್ಯರು ದೇಶಭಕ್ತಿಗೀತೆ ಹಾಡಿದರು. ಈ ಸಂದರ್ಭದಲ್ಲಿ ತಾಲೂಕು ಟ್ರಸ್ಟ್ ನ ,ಕಾರ್ಯದರ್ಶಿ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ನಿರ್ದೇಶಕರಾದ ವೀಣಾ ಮೋಂಟಡ್ಕ ಹಿರಿಯರಾದ ಆನಂದ ಮಾಸ್ತರ್ ಅಕ್ಕಿಮಲೆ, ಮಹಿಳಾ ಮಂಡಲದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಹ ಸಂಚಾಲಕಿ ತೃಶಾಲ ಕುದ್ಕುಳಿ ಕಾರ್ಯಕ್ರಮ ನಿರೂಪಿಸಿದರು. ಗೀತಾ ಅಡ್ಕಾರು ವಂದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಂಡಿತು.