ಸಂಪಾಜೆಯಲ್ಲಿ ರಕ್ತದಾನ ಶಿಬಿರ

0


ಸಂಪಾಜೆ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಸಂಪಾಜೆ,ರೆಡ್ ಕ್ರಾಸ್ ಸೊಸೈಟಿ, ಲೇಡಿಗೋಷನ್ ಹಾಸ್ಪಿಟಲ್ ಇದರ ಆಶ್ರಯದಲ್ಲಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ 22ನೇ ರಕ್ತದಾನ ಶಿಬಿರ ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಇತ್ತೀಚೆಗೆ ನಡೆಯಿತು.


ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸರ್ವರನ್ನು ಸ್ವಾಗತಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಲಯನ್ಸ್ ಕ್ಲಬ್ ಅಧ್ಯಕ್ಷರಾದ ಯೋಗಿಶ್ವರ್ ರಕ್ತದಾನ ದ ಮಾಹಿತಿಯನ್ನು ನೀಡಿದರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಮಾಜಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಅಬೂಸಾಲಿ ಗೂನಡ್ಕ, ವಿಮಲಾ ಪ್ರಸಾದ್, ತೆಕ್ಕಿಲ್ ಪ್ರತಿಷ್ಠಾನದ ಟಿ. ಎಂ. ಶಾಹಿದ್ ತೆಕ್ಕಿಲ್,ಮಾಜಿ ಅಧ್ಯಕ್ಷರಾದ ಯಮನ ಬಿ. ಎಸ್, ಪಂಚಾಯತ್ ಸದಸ್ಯರಾದ ವಿಜಯಕುಮಾರ್, ಲಯನ್ಸ್ ಕ್ಲಬ್ ನ ಕಿಶೋರ್ ಕುಮಾರ್ ಸ್ಪಾಟ್ ಕಂಪ್ಯೂಟರ್, ಪ್ರಶಾಂತ್ ವಿ. ವಿ. ನವೀನ್ ಚಂದ್ರ ಕಂಪನಿತೋಟ ,ವಾಸುದೇವ ಕಟ್ಟೆಮನೆ, ಇಂದಿರಾ ದೇವಿಪ್ರಸಾದ್ ,ಅಕ್ಷಯ ಟ್ರಸ್ಟ್ ನ ಕರೀಂ, ಸಿದ್ದಿಕ್ ಕಟ್ಟೆಕಾರ್, ಸಿದ್ದಿಕ್ ದರ್ಕಾಸ್, ಡಾ ಜಯರಾಮ್,ಧರ್ಮಸ್ಥಳ ವಿಪತ್ತು ತಂಡದ ಚಿದಾನಂದ ಮತ್ತು ತಂಡ ಅಲ್. ಅಮೀನ್ ಸಂಸ್ಥೆಯ ಸಾದಿಕ್ ಕುಂಭಕೋಡ್, ಮಾಜಿ ಪಂಚಾಯತ್ ಉಪಾಧ್ಯಕ್ಷರಾದ ಆಶಾ ವಿನಯ,ಜಯಾನಂದ ಸಂಪಾಜೆ, ಸಂಘ ಸಂಸ್ಥೆಯ ಪದಾಧಿಕಾರಿಗಳು ಯುವಕರು ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.