ಇಸ್ರೊದ ಮಿಷನ್ ತಂಡದಲ್ಲಿ ಸುಳ್ಯದ ವೇಣುಗೋಪಾಲ ಭಟ್ ಉಬರಡ್ಕ
ಚಂದ್ರಯಾನ 3 ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ದೇಶವೇ ಸಂಭ್ರಮಿಸುತಿದೆ. ಚಂದ್ರಯಾನದ ಯಶಸ್ವಿಗೆ ನೂರಾರು ವಿಜ್ಞಾನಿಗಳು, ಇಂಜಿನಿಯರ್ ಗಳು ದುಡಿದಿದ್ದಾರೆ. ಸುಳ್ಯ ತಾಲೂಕಿನ ವಿಜ್ಞಾನಿಗಳು ಈ ಯಶಸ್ವಿನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂಬುದು ಸುಳ್ಯದವರಾದ ನಮ್ಮ ಹೆಮ್ಮೆ. ಅವರಲ್ಲಿ ಸುಳ್ಯ ತಾಲೂಕಿನ ವೇಣುಗೋಪಾಲ ಭಟ್ ಉಬರಡ್ಕ ಕೂಡ ಒಬ್ಬರು.
ವೇಣುಗೋಪಾಲ ಉಬರಡ್ಕ ಇವರು ಇಸ್ರೊದಲ್ಲಿ ವಿಜ್ಞಾನಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದ್ರಯಾನ 3ರಲ್ಲಿ ಪಿಸಿಡಿ ಡಿಸೈನಿಂಗ್ ಟೀಮ್ ಸ್ಯಾಟ್ ಲೈಟ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು.
ಇಸ್ರೊದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೇಣುಗೋಪಾಲ್ ಇವರು ಸುಳ್ಯದಲ್ಲಿ ಪಾಲಿಟೆಕ್ನಿಕ್ ತಾಂತ್ರಿಕ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಬಿಇ, ಎಂಇ, ಶಿಕ್ಷಣ ಪಡೆದು ಇಸ್ರೊದಲ್ಲಿ ವಿಜ್ಞಾನಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಸ್ರೊದಲ್ಲಿ ಡಿಜಿಟಲ್ ಸ್ಟ್ರಕ್ಚರ್ ಡಿಸೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.