ಸುಳ್ಯ ಮೊಸರು ಕುಡಿಕೆ ಉತ್ಸವದ ಪೂರ್ವ ಸಿದ್ಧತಾ ಸಭೆ

0

ಶೋಭಾಯಾತ್ರೆಯಲ್ಲಿ ಆಕರ್ಷಕ ಅಟ್ಟಿ ಮಡಕೆ ಒಡೆಯುವ ಸಾಹಸದ ಪ್ರದರ್ಶನ

ವಿಶ್ವ ಹಿಂದೂ ಪರಿಷದ್ ಬಜರಂಗಳ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸಹಯೋಗದಲ್ಲಿ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸೆ.16 ರಂದು ಸುಳ್ಯದಲ್ಲಿ ನಡೆಯಲಿರುವ 10 ನೇ ವರ್ಷದ ಮೊಸರು ಕುಡಿಕೆ ಉತ್ಸವದ ಪೂರ್ವ ಸಿದ್ಧತಾ ಸಭೆಯು ಸುಳ್ಯದ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಆ.24 ರಂದು ನಡೆಯಿತು.

10 ನೇ ವರ್ಷದ
ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸಂಘದ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ ರವರು ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಗ್ರಾಮ ಮಟ್ಟದ ಕಾರ್ಯಕರ್ತರನ್ನು ಒಟ್ಟು ಸೇರಿಸಿ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರೇರೆಪಣೆ ನೀಡಿ ಸಂಘಟನೆಯನ್ನು ಬಲ ಪಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ಕರೆ ನೀಡಿದರು.

ಶೋಭಾಯಾತ್ರೆಯಲ್ಲಿ ಸುಳ್ಯದ ಮುಖ್ಯ ರಸ್ತೆಯಲ್ಲಿ ವೀರ ಯುವಕರಿಂದ ಸಾಹಸಮಯ ಅಟ್ಟಿ ಮಡಕೆ ಒಡೆಯುವ ಕೇಂದ್ರಗಳ ಬಗ್ಗೆ ಸಮಿತಿಯ ಉಪಾಧ್ಯಕ್ಷ ಪ್ರಕಾಶ್ ಯಾದವ್ ವಿವರ ನೀಡಿದರು.
ಆರ್ಥಿಕ ಕ್ರೋಢಿಕರಣಕ್ಕೆ ಕೂಪನ್ ವ್ಯವಸ್ಥೆ ಮತ್ತು ಪ್ರಾಯೋಜಕರನ್ನು ಸಂಪರ್ಕ ಮಾಡುವ ಕುರಿತು ಜವಬ್ದಾರಿ ಹಂಚಿಕೆಯ ಬಗ್ಗೆ ಸೋಮಶೇಖರ ಪೈಕ ವಿವರ ನೀಡಿದರು.

ವೇದಿಕೆಯಲ್ಲಿ ವಿ.ಹೆಚ್.ಪಿ ಪುತ್ತೂರು ಜಿಲ್ಲಾ ವಿಭಾಗದ ಉಪಾಧ್ಯಕ್ಷ ಸತೀಶ್ ,ಸುಳ್ಯ ತಾಲೂಕು ವಿ.ಹೆಚ್.ಪಿ. ಅಧ್ಯಕ್ಷ ಸೋಮಶೇಖರ ಪೈಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘಟನೆಯ ಪ್ರಮುಖರಾದ ಹರೀಶ್ ಕಂಜಿಪಿಲಿ, ವಿ.ಹೆಚ್.ಪಿ ಜಿಲ್ಲಾ ಸೇವಾ ಪ್ರಮುಖ್ ಸೀತಾರಾಮ ಭಟ್, ವಿನಯಕುಮಾರ್ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ಜಗದೀಶ್ ಸರಳಿಕುಂಜ, ನಾರಾಯಣ ಕೇಕಡ್ಕ, ಹರೀಶ್ ರೈ ಉಬರಡ್ಕ,‌ಸುನಿಲ್ ಕೇರ್ಪಳ, ರಾಜೇಶ್ ಶೆಟ್ಟಿ ಮೇನಾಲ, ಪ್ರಭೋದ್ ಶೆಟ್ಟಿ ಮೇನಾಲ,
ಸುನಿಲ್ ರೈ ಮೇನಾಲ, ಮಹೇಶ್ ರೈ ಮೇನಾಲ, ಪ್ರವೀಣ್ ಜಯನಗರ,
ಸಮಿತಿಯ
ಉಪಾಧ್ಯಕ್ಷ ರಜತ್ ಅಡ್ಕಾರ್, ಪ್ರಕಾಶ್ ಯಾದವ್,ಪ್ರಧಾನ ಕಾರ್ಯದರ್ಶಿ
ದೇವಿಪ್ರಸಾದ್ ಅತ್ಯಾಡಿ, ಕಾರ್ಯದರ್ಶಿ ಸಂದೀಪ್ ವಳಲಂಬೆ, ಬಜರಂಗದಳ ಸಂಯೋಜಕ್ ಹರಿಪ್ರಸಾದ್ ಎಲಿಮಲೆ, ವ್ಯವಸ್ಥಾ ಪ್ರಮುಖ್ ಭಾನುಪ್ರಕಾಶ್ ಪೆಲತ್ತಡ್ಕ , ಕಾರ್ಯಕರ್ತರಾದ ಪ್ರಮೋದ್, ಅರವಿಂದ, ಹರೀಶ್ ಜಟ್ಟಿಪಳ್ಳ, ಕಮಲಾಕ್ಷ ಮೇನಾಲ, ಗಿರೀಶ್ ಕುಂಟಿನಿ ಹಾಗೂ ಸಂಘಟನೆಯ ಮತ್ತಿತರರ ಕಾರ್ಯಕರ್ತರು ಭಾಗವಹಿಸಿದ್ದರು.