ಸೆ.01 : ಬೆಳ್ಳಾರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ,ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಸೆ.01 ರಂದು ಬೆಳಿಗ್ಗೆ ಅಮ್ಮು ರೈ ಕಾಂಪ್ಲೆಕ್ಸ್ ನ ದೇವಿ ಹೈಟ್ಸ್ ನಲ್ಲಿ ನಡೆಯಲಿದೆ.
ಉಚಿತ ಕಣ್ಣಿನ ಪರೀಕ್ಷೆ, ಚಿಕಿತ್ಸೆ ಮತ್ತು ಸಲಹೆ,ಉಚಿತ ಕಣ್ಣಿನ ಪೊರೆ ಆಪರೇಶನ್,ಉಚಿತ ಪ್ರಯಾಣ,ವಸತಿ,ಊಟ ಮತ್ತು ಉಪಾಹಾರ,ಉಚಿತ ಕನ್ನಡಕ ವಿತರಣೆ ನಡೆಯಲಿದೆ.ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು,ಜಿಲ್ಲಾ ಸಂಚಾರಿ ನೇತ್ರ ಘಟಕ ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ, ಇವರ ಸಹಯೋಗದೊಂದಿಗೆ ಕೆಎಂಸಿಯ ಪ್ರಸಿದ್ದ ನೇತ್ರ ತಜ್ಞರು ಭಾಗವಹಿಸಲಿದ್ದಾರೆ.
ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಅಧ್ಯಕ್ಷ ಶಶಿಧರ ಬಿ.ಕೆ.ತಿಳಿಸಿದ್ದಾರೆ.