ಸಭೆಯಲ್ಲಿ ಕಿಕ್ಕಿರಿದು ಸೇರಿದ ಮಹಿಳಾ ಫಲಾನುಭವಿಗಳು
ಕಾಂಗ್ರೆಸ್ ಸರಕಾರದ ಮಹಾತ್ವಕಾಂಕ್ಷಿ ಮಹಿಳಾ ಸಬಲೀಕರಣ ಯೋಜನೆಯಾದ ಗೃಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳಲಿರುವ ಹಿನ್ನೆಲೆಯಲ್ಲಿ ಇಂದು ಸುಳ್ಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸುಳ್ಯ ನಗರ ಪಂಚಾಯತ್ ಇದರ ಸಹಯೋಗದಲ್ಲಿ ನಗರ ಪಂಚಾಯತ್ ಕಚೇರಿ ಮತ್ತು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಎಲ್ಇಡಿ ಪರದೆಯನ್ನು ಅಳವಡಿಸಿ ವ್ಯವಸ್ಥೆಗಳನ್ನು ಆಯೋಜಿಸಲಾಗಿದೆ.
ಈಗಾಗಲೇ ಈ ಕಾರ್ಯಕ್ರಮಕ್ಕೆ ಸುಳ್ಯ ತಹಶೀಲ್ದಾರ್ ಮಂಜುನಾಥ್, ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಿ ಡಿ ಪಿ ಒ ಶೈಲಜಾ, ನಗರ ಪಂಚಾಯತ್ ಮುಖ್ಯ ಅಧಿಕಾರಿ ಸುಧಾಕರ್ ಸೇರಿದಂತೆ ನಗರ ಪಂಚಾಯತಿ ಸದಸ್ಯರುಗಳು ಭಾಗವಹಿಸಿದ್ದಾರೆ.
ಸುಳ್ಯ ನಗರದ ವಿವಿಧ ವಾರ್ಡಿನ ನೂರಾರು ಮಂದಿ ಗೃಹಲಕ್ಷ್ಮಿ ಫಲಾನುಭವಿಗಳು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿರುವ ದೃಶ್ಯ ಕಂಡು ಬರುತ್ತಿದೆ.