ಬೊಳುಬೈಲು: ನೆಕ್ರಾಜೆ ಪರಿಸರದಲ್ಲಿ ಕಾಡುಕೋಣ ದಾಳಿ ಕೃಷಿ ನಾಶ

0

ನೆಕ್ರಾಜೆ, ಕಾಟೂರು, ಮೋಂಟಡ್ಕ ಭಾಗದಲ್ಲಿ ವಿಪರೀತ ಕಾಡುಕೋಣ ಹಾವಳಿ

ಜಾಲ್ಸೂರು ಗ್ರಾಮದ ಬೊಳುಬೈಲಿನ ನೆಕ್ರಾಜೆ ಪರಿಸರದಲ್ಲಿ ಕಾಡುಕೋಣ ದಾಳಿಯಿಂದ ಕೃಷಿ ತೋಟಗಳಿಗೆ ಹಾನಿ ಸಂಭವಿಸಿ, ಕೃಷಿ ನಾಶವಾದ ಘಟನೆ ಆ.29ರಂದು ರಾತ್ರಿ ಸಂಭವಿಸಿದೆ.

ಹಿಮಕರ ನೆಕ್ರಾಜೆ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿದ ಕಾಡುಕೋಣಗಳು, ಸುಮಾರು ಇಪ್ಪತ್ತು ಅಡಿಕೆ ಸಸಿಗಳನ್ನು ಮುರಿದು ಕೃಷಿ ನಾಶಗೊಳಿಸಿರುವುದಾಗಿ ತಿಳಿದುಬಂದಿದೆ.

ಬೊಳುಬೈಲು, ನೆಕ್ರಾಜೆ, ಕಾಟೂರು, ಮೋಂಟಡ್ಕ ಪರಿಸರದಲ್ಲಿ ವಿಪರೀತ ಕಾಡುಕೋಣಗಳ ಹಾವಳಿಯಿದ್ದು, ಕೆಲವೊಂದು ಸಂದರ್ಭಗಳಲ್ಲಿ ಸಂಜೆಯ ವೇಳೆಗೆ ರಸ್ತೆಯಲ್ಲಿ ಕಾಡುಕೋಣ ಕಂಡುಬರುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ.