ರಾಯರಿಗೆ ಪಲ್ಲಕ್ಕಿ ಉತ್ಸವ ಭಜನೆ ಹಾಗೂ ವಿವಿಧ ಕಲಾ ಪ್ರಕಾರಗಳಲ್ಲಿ ತೊಟ್ಟಿಲ ಸೇವೆ
ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ರಾಯರ 352 ನೇ ವರ್ಷದ ಆರಾಧನಾ ಮಹೋತ್ಸವವು ಸೆ.1 ರಂದು ಭಕ್ತಿ ಸಡಗರದಿಂದ ನಡೆಯಿತು.
ಸಂಜೆ ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಸೇವೆಯು ನಡೆಯಿತು.
ಪ್ರಧಾನ ಅರ್ಚಕ ಶ್ರೀ ಹರಿ ಎಳಚಿತ್ತಾಯ ರವರ ನೇತೃತ್ವದಲ್ಲಿ ರಾಯರ ಪಲ್ಲಕ್ಕಿ ಸೇವೆ,ತೊಟ್ಟಿಲು ಸೇವೆ,ಅಷ್ಟಾವಧಾನ ಸೇವೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಈ ಸಂದರ್ಭದಲ್ಲಿ ವಿಶೇಷವಾಗಿ ಋಗ್,ಎಜುರ್ ವೇದ ಪಾರಾಯಣ, ಸಾಮವೇದ ಪಾರಾಯಣ,ವ್ಯಾಕರಣ ,ಪಂಚಾಂಗ, ಭಗವದ್ಗೀತೆ ಪಠಣಹಾಗೂಸ್ಯಾಕ್ಸೋಫೋನ್ ವಾದನ, ಕೊಳಲು ವಾದನ, ಭಜನೆ ,ಭರತನಾಟ್ಯ, ಚೆಂಡೆ ವಾದನ, ಯಕ್ಷಗಾನ ಕಲಾ ಸೇವೆಗಳೊಂದಿಗೆ
ಶ್ರೀ ಗುರು ರಾಯರ ತೊಟ್ಟಿಲ ಪೂಜೆಯು ಅತ್ಯಂತ ಭಕ್ತಿ ಸಂಭ್ರಮದಿಂದ ಜರುಗಿತು. ಸೇರಿದ ಭಕ್ತಾದಿಗಳು ಈ ಎಲ್ಲಾ ಸೇವೆಯನ್ನು ಭಕ್ತಿ ಪರವಶರಾಗಿ ಕಣ್ತುಂಬಿಕೊಂಡರು.
ರಾತ್ರಿಮಹಾಪೂಜೆಯಾಗಿ ಪ್ರಸಾದವಿತರಣೆಯಾಯಿತು. ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಸಂತರ್ಪಣೆಯು ನಡೆಯಿತು.
ಈ ಸಂದರ್ಭದಲ್ಲಿ ಮಠದ ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ, ಸಂಚಾಲಕ ಪ್ರಕಾಶ್ ಮೂಡಿತ್ತಾಯ ಹಾಗೂ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಊರ ಹಾಗೂ ಪರ ಊರಿನ ಭಕ್ತರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.