ಮಂಡೆಕೋಲು: ಪಂಜಿಕಲ್ಲು- ಮೈತಡ್ಕ ತೂಗು ಸೇತುವೆಯ ದುರಸ್ತಿ ಕಾರ್ಯ

0

ಸುದ್ದಿ ವೆಬ್ ಸೈಟ್ ವರದಿಗೆ ಸ್ಪಂದಿಸಿ ಕಾಳಜಿ ವಹಿಸಿದ ಸ್ಥಳೀಯ ಯುವಕರು

ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು -ಮೈತಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಲಾದ ತೂಗು ಸೇತುವೆಯು ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂಬ ಸುದ್ದಿ ವೆಬ್ ಸೈಟ್ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳೀಯ ಯುವಕರ ತಂಡ ಸ್ಪಂದಿಸಿ ಸೇತುವೆ ದುರಸ್ತಿ ಪಡಿಸಿರುವುದಾಗಿ ತಿಳಿದು ಬಂದಿದೆ.

ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳು ಸಂಚರಿಸುವ ಸೇತುವೆಯ ಒಂದು ಬದಿಯಲ್ಲಿ ಮೇಲ್ಭಾಗಕ್ಕೆ ನಡೆದುಕೊಂಡು ಹೋಗಲು ಹಾಸಿರುವ ಸಿಮೆಂಟ್ ಸ್ಯ್ಲಾಬ್ ಒಡೆದು ಹೋಗಿ ತಿಂಗಳು ಎರಡು ಕಳೆದರೂ ಸರಿ‌ಪಡಿಸಿರಲಿಲ್ಲ.


ಈ ಸೇತುವೆಯನ್ನೇ ಅವಲಂಬಿತರಾಗಿರುವ
ನಾಗರಿಕರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೂ ಕಬ್ಬಿಣದ ರಾಡಿನ ಮಧ್ಯೆ ಕಾಲು ಸಿಕ್ಕಿ ಹಾಕಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆ ಇರುವುದನ್ನು ಮನಗಂಡು ಸ್ಥಳೀಯರ ದೂರಿನ ಮೇರೆಗೆ ಸುದ್ದಿ ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಲಾಗಿತ್ತು.


ವರದಿ ಪ್ರಕಟಗೊಂಡ ಎರಡೇ ದಿನದಲ್ಲಿ ಸೇತುವೆಯ ಮೇಲ್ಭಾಗದಲ್ಲಿ ಒಡೆದು ಹೋಗಿರುವ ಜಾಗಕ್ಕೆ ಹೊಸ ಸಿಮೆಂಟ್ ಸ್ಲ್ಯಾಬ್ ಅಳವಡಿಸಿ ಸ್ಥಳೀಯ ಯುವಕರು ಕಾಳಜಿ ವಹಿಸಿದ್ದಾರೆ.ಯುವಕರ ಈ ಕಾರ್ಯಕ್ಕೆ ಸ್ಥಳೀಯ ನಾಗರಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.