ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ವಿಜ್ಞಾನ ಕಾರ್ಯಗಾರ

0

ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಭೌತಶಾಸ್ತ್ರದ ಕಾರ್ಯಗಾರವನ್ನು ಭೌತಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಡೈಸನ್ ಪನೆಂಗಾಡನ್ ತ್ರಿಶೂರ್ , ಇವರು ಸೆ. 1 , 2 ರಂದು ನೆರವೇರಿಸಿಕೊಟ್ಟರು.

ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜಾ ಕಾರ್ಯಾಗಾರಕ್ಕೆ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ಸ್ವಾಗತಿಸಿ ,ಕಂಪ್ಯೂಟರ್ ಶಿಕ್ಷಕಿ ಅನಿತಾ ಮಸ್ಕರೇನಸ್ ವಂದಿಸಿದರು. ಕಾರ್ಯಗಾರದ ಯಶಸ್ವಿಗೆ ಎಲ್ಲಾ ಪ್ರೌಢಶಾಲಾ ಶಿಕ್ಷಕರು ಸಹಕರಿಸಿದರು.