ಕೃಷ್ಣ ಪ್ರಜ್ಞಾ ಟ್ರಸ್ಟ್ ಸುಳ್ಯ ಮತ್ತು ಕೃಷ್ಣ ನಾಮ ಭಾವಾಮೃತ ಸಂಘ ಹರಿಹರಪಲ್ಲತಡ್ಕ ಇದರ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಚರಣೆಯು ಸೆ.೬ರಂದು ಹರಿಹರಪಲ್ಲತಡ್ಕದ ಶ್ರೀಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಸೆ.೬ರಂದು ಮಧ್ಯಾಹ್ನ ೨ ರಿಂದ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹರಿಹರಪಲ್ಲತಡ್ಕ ಹಾಗೂ ಶ್ರೀ ದುರ್ಗಾ ಭಜನಾ ಮಂಡಳಿ ನಡುಗಲ್ಲು ಇವರಿಂದ ದಾಸ ಸಾಹಿತ್ಯ, ಸಂಜೆ ೪ ರಿಂದ ಮಕ್ಕಳ ಕೃಷ್ಣವೇಷ ಸ್ಪರ್ಧೆ, ಬಳಿಕ ಮಕ್ಕಳಿಂದ ಸಾಮೂಹಿಕ ಭಗವದ್ಗೀತೆ ಪಠಣ, ನಂತರ ಭಗವದ್‌ಗೀತೆ ತರಗತಿಯ ವಿದ್ಯಾರ್ಥಿಗಳಿಗೆ ಕೃಷ್ಣ ಪ್ರಜ್ಞೆ ಸ್ವೀಕಾರ, ಬಳಿಕ ಶ್ರೀ ಕೃಷ್ಣ ಪರಮಾತ್ಮನಿಗೆ ಅಲಂಕೃತ ವೇದಿಕೆ ಪುಷ್ಪಾರ್ಚನೆ ನಡೆಯಲಿದೆ.
ರಾತ್ರಿ ೮ ಗಂಟೆಗೆ ೨೫ ಕ್ಕಿಂತಲೂ ಹೆಚ್ಚು ಮನೆಗಳಿಂದ ಮಡಿ ಅಡಿಗೆ ಬಗೆ ಬಗೆಯ ಭಕ್ಷ್ಯಗಳ ಬಾಗಿನ ಅರ್ಪಣೆ ನಡೆಯಲಿದ್ದು, ನಂತರ ಸುಬ್ರಹ್ಮಣ್ಯದ ವಿದ್ಯಾಸಾಗರ ತಂಡದಿಂದ ಸಂಕೀತನೆ ನಡೆಯುವುದು.
ಮಕ್ಕಳ ಕೃಷ್ಣ ವೇಷ ಸ್ಪರ್ಧೆಯನ್ನು ೫ ಗ್ರಾಮಗಳ ವ್ಯಾಪ್ತಿಯ ಮಕ್ಕಳಿಗಾಗಿ ಇಸ್ಕಾನ್ ಮಾದರಿಯಲ್ಲಿ ನಡೆಸಲಾಗುವುದೆಂದು ಕೃಷ್ಣ ಪ್ರಜ್ಞಾ ಟ್ರಸ್ಟ್ ನಿರ್ದೇಶಕ ಪೊಯ್ಯಮಜಲು ಹೊನ್ನಪ್ಪರು ತಿಳಿಸಿದ್ದಾರೆ.