ಬ್ರಹ್ಮಕುಮಾರೀಸ್ ಧ್ಯಾನ ಕೇಂದ್ರದಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬಾಲಗೋಪಾಲ ದರ್ಶನ

0

ಭಕ್ತರಿಗೆ
ಬಾಲಗೋಪಾಲನ ತೊಟ್ಟಿಲು ತೂಗುವ ಅಭೂತಪೂರ್ವ ಅವಕಾಶ

ಸುಳ್ಯದ ಅಂಬಟೆಡ್ಕದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರೀಸ್ ರಾಜಯೋಗ ಧ್ಯಾನ ಕೇಂದ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಬಾಲಗೋಪಾಲ ದರ್ಶನ ಹಾಗೂ ಬಾಲಗೋಪಾಲನ ತೊಟ್ಟಿಲ ತೂಗ ಬನ್ನಿರಿ ಎಂಬ ವಿಶೇಷ ಕಾರ್ಯಕ್ರಮ ಇಂದು ಪೂರ್ವಾಹ್ನ ಆರಂಭಗೊಂಡಿತು.

ಬೆಳಗ್ಗೆಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾಕಾರ್ಯಕ್ರಮದೊಂದಿಗೆಆರಂಭವಾಯಿತು. ತೊಟ್ಟಿಲಿನಲ್ಲಿರುವ ಬಾಲಗೋಪಾಲನ ತೂಗಿ ಮಂಗಳಾರತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಾಲಗೋಪಾಲನ ದರ್ಶನ ಎಂಬ ವಿಶೇಷ ಕಾರ್ಯಕ್ರಮ ಕಳೆದ 75 ರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಧ್ಯಾನ ಕೇಂದ್ರದಲ್ಲಿ ಆರಂಭಿಸಲಾಯಿತು. ಬಾಲಗೋಪಾಲ ಎಂದರೆ ಭವಿಷ್ಯ ಭಾರತ. ಬಾಲಗೋಪಾಲನ ಪ್ರೀತಿ ಗಳಿಸಬೇಕಾದರೆ ನಮ್ಮ ಸಮಯವನ್ನು ಧ್ಯಾನಕ್ಕೆ ಮೀಸಲಿಡಬೇಕು. ಬಾಲಗೋಪಾಲನ ಜತೆಯ ಜೀವನ ಭವಿಷ್ಯದಲ್ಲಿ ಪಡೆಯಲು ಸಾಧ್ಯವಿದೆ ಎಂದು ಬ್ರಹ್ಮಕುಮಾರೀಸ್ ಉಮಾ ರವರು ಸಂದೇಶ ನೀಡಿದರು.

ಮಂಗಳಾರತಿಯೊಂದಿಗೆ ತೊಟ್ಟಿಲು ತೂಗಿ ಚಾಲನೆ ನೀಡಿದ ವರ್ತಕರ ಸಂಘ ದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ರವರು ಮಾತನಾಡಿ
“ಸಾತ್ವಿಕ ಸಜ್ಜನರಿಗೆ ಧ್ಯಾನ ಅಧ್ಯಾತ್ಮಿಕವಿಚಾರಧಾರೆಗಳಿಗೆ ಹಾಗೂ ವಿಶ್ರಾಂತ ಜೀವನದಲ್ಲಿರುವ ಹಲವರಿಗೆ ನೆಮ್ಮದಿಯ ತಾಣವಾಗಿ ಭಕ್ತರ ಪಾಲಿಗೆ ಸ್ಪೂರ್ತಿ ತುಂಬುವ ಕಾಯಕಬ್ರಹ್ಮಕುಮಾರೀಸ್ ಧ್ಯಾನ ಕೇಂದ್ರವು ನಿರ್ವಹಿಸುತ್ತಿದೆ. ವಿದೇಶದಲ್ಲಿ ಇರುವ
ದೊಡ್ಡ ಮಟ್ಟದ ವಿಶ್ವ ವಿದ್ಯಾಲಯವು ಶ್ರೀ ಕೃಷ್ಣ ಪರಮಾತ್ಮನ ಬೋಧನೆಯನ್ನು ಅನುಸರಿಸಿಕೊಂಡು ಜಾಗತಿಕ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ವರ್ಗದ ಭಕ್ತರಿಗೆ ಬಾಲಗೋಪಾಲನಿಗೆ ಮಂಗಳಾರತಿ ಬೆಳಗಿ ತೊಟ್ಟಿಲು ತೂಗುವ ಸುಯೋಗ ಒದಗಿಸಿಕೊಡುವ ಕಾರ್ಯ ಅಭೂತಪೂರ್ವ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್, ವೈದ್ಯರಾದ ಡಾ| ‌ಸಾಯಿಗೀತಾ ಜ್ಞಾನೇಶ್, ಉದ್ಯಮಿ ಸೂರಯ್ಯಸೂಂತೋಡು,ನಿವೃತ್ತ ‌ಪ್ರಾಂಶುಪಾಲ ದಾಮೋದರ ಗೌಡ, ಡಾ.ರಂಗಯ್ಯ, ನಿವೃತ್ತ ಇ.ಒ ಜಗದೀಶ್ ಅರಂಬೂರು,
ಮಂಜು ಮೇಸ್ತ್ರಿ ಬಳ್ಳಾರಿ, ದೀಪಾಂಜಲಿ ಭಜನಾ ಮಂಡಳಿಯ ಸದಸ್ಯರು, ಮತ್ತಿತರರು ಭಾಗವಹಿಸಿದರು.

ಆಗಮಿಸಿದ ಎಲ್ಲರೂ ಬಾಲಗೋಪಾಲನಿಗೆ ಮಹಾ ಮಂಗಳಾರತಿ ಬೆಳಗಿ ತೊಟ್ಟಿಲು ತೂಗುವ ಮೂಲಕ ಭಕ್ತಿ ಪರವಶರಾದರು.

ಧ್ಯಾನ ಕೇಂದ್ರದಲ್ಲಿ
ಸೆ.4 ರಿಂದ 10 ರ ತನಕ ನಿರಂತರವಾಗಿ ಭಕ್ತರಿಗೆ ಬಾಲಗೋಪಾಲನ ದರ್ಶನ ಕ್ಕೆ ಅವಕಾಶವಿರುವುದಾಗಿ ಸಿಬ್ಬಂದಿ ಉಮೇಶ್ ರವರು ತಿಳಿಸಿದರು.